ಕೋಝಿಕ್ಕೋಡು; ಜೆಡಿಟಿ ಇಸ್ಲಾಂ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಘರ್ಷಣೆ: 70ಕ್ಕೂ ಅಧಿಕ ಜನರಿಗೆ ಗಾಯ

ಕೋಝಿಕ್ಕೋಡು;ಜಿಡಿಟಿ ಇಸ್ಲಾಂ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಘರ್ಷಣೆ:70ಕ್ಕೂ ಅಧಿಕ ಜನರಿಗೆ ಗಾಯ

ಕೋಝಿಕ್ಕೋಡು;ಕೇರಳದ ಕೋಝಿಕ್ಕೋಡ್ ಬೀಚ್‌ನಲ್ಲಿ ಸಂಗೀತ ಕಾರ್ಯಕ್ರಮದ ಸ್ಥಳದಲ್ಲಿ ಘರ್ಷಣೆ ಸಂಭವಿಸಿ ಕನಿಷ್ಠ 70ಜನರು ಗಾಯಗೊಂಡಿದ್ದಾರೆ.

ಜೆಡಿಟಿ ಇಸ್ಲಾಂ ಕಾಲೇಜಿನ ಆರೈಕೆ ಘಟಕವು ನಿಧಿ ಸಂಗ್ರಹಿಸಲು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದ ಸ್ಥಳದಲ್ಲಿ ಅನಿಯಂತ್ರಿತ ಜನಸಾಗರ ನೆರೆದಿದ್ದರಿಂದ ಈ ಘಟನೆ ಸಂಭವಿಸಿದೆ.

ವಿದ್ಯಾರ್ಥಿಗಳು,ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯರು ಗಾಯಗೊಂಡಿದ್ದು,ವೈದ್ಯಕೀಯ ಚಿಕಿತ್ಸೆಗಾಗಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ವೀಕ್ಷಕರಿಗೆ ಸೀಮಿತ ಸ್ಥಳಾವಕಾಶವನ್ನು ಹೊಂದಿದ್ದ ಸ್ಥಳವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರವೇಶಿಸಲು ಪ್ರಯತ್ನಿಸಿದ್ದು,ಬೃಹತ್ ಜನಸಮೂಹಕ್ಕೆ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗಲಿಲ್ಲ.

ಈ ವೇಳೆ ಪೊಲೀಸ್ ಅಧಿಕಾರಿಗಳ ಮೇಲೆ ಸಾರ್ವಜನಿಕರು ಕಲ್ಲು, ಮರಳು ಎಸೆದಿದ್ದು ಘರ್ಷಣೆಗೆ ಕಾರಣವಾಯಿತು. ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು, ನಂತರ ಗುಂಪು ಚದುರಿ ಓಡಿಹೋಗಿದೆ.

ಪ್ರೇಕ್ಷಕರು ಬ್ಯಾರಿಕೇಡ್‌ಗಳನ್ನು ಮುರಿದು ಸ್ಥಳಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ,ಇದರಿಂದಾಗಿ ಹಲವರು ಉಸಿರಾಟದ ತೊಂದರೆ ಅನುಭವಿಸಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.ಪರಿಸ್ಥಿತಿ ಹತೋಟಿಗೆ ತರಲು ಹಲವು ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು.

ಟಾಪ್ ನ್ಯೂಸ್