ಜಯಲಲಿತಾ ಸಾವಿಗೆ ಕಾರಣವೇನು? ಸುದೀರ್ಘ ತನಿಖೆ ನಡೆಸಿ ವರದಿ ಸಲ್ಲಿಸಿದ ಆಯೋಗ

ಜಯಲಲಿತಾ ಸಾವಿಗೆ ಕಾರಣವೇನು? ಸಿಎಂಗೆ ಸುದೀರ್ಘ ತನಿಖೆ ನಡೆಸಿ ವರದಿ ಸಲ್ಲಿಸಿದ ಆಯೋಗ

ತಮಿಳುನಾಡು;ಜಯಲಲಿತಾ ಸಾವಿನ ಪ್ರಕರಣದ ತನಿಖೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಆರುಮುಘಸ್ವಾಮಿ ಆಯೋಗ ತನ್ನ ವರದಿಯನ್ನು ಸಿಎಂ ಎಂಕೆ ಸ್ಟಾಲಿನ್ ಅವರಿಗೆ ಸಲ್ಲಿಸಿದೆ.

ಆರುಮುಘಸ್ವಾಮಿ ಆಯೋಗ 590 ಪುಟಗಳ ವರದಿಯನ್ನು ತಮಿಳುನಾಡು ಮುಖ್ಯಮಂತ್ರಿಗೆ ಸಲ್ಲಿಕೆ‌ ಮಾಡಿದೆ.

ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ ಅವರ ಸಾವಿಗೆ ನಿಜವಾದ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಲು ಸಮಿತಿ‌
ರಚಿಸಲಾಗಿತ್ತು.

ಜಯಲಲಿತಾ ಅವರು 5 ಡಿಸೆಂಬರ್ 2016 ರಂದು ರಾತ್ರಿ 11.30 ಕ್ಕೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.ಜಯಲಲಿತಾ ಅವರ ನಿಗೂಢ ಚಿಕಿತ್ಸೆ ಮತ್ತು ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆಗಾಗಿ ತಮಿಳುನಾಡಿನ ಹಿಂದಿನ ಇಕೆ ಪಳನಿಸಾಮಿ ಸರ್ಕಾರವು ನ್ಯಾಯಮೂರ್ತಿ ಅರುಮುಸ್ವಾಮಿ ನೇತೃತ್ವದ ಆಯೋಗವನ್ನು ರಚಿಸಿತ್ತು.

ಪನ್ನೀರಸೆಲ್ವಂ ಅವರು ಆಯೋಗದ ಮುಂದೆ ಹಾಜರಾಗಿದ್ದರು. ಅವರು,ಜಯಲಲಿತಾ ಅವರು ಯಾಕೆ ಆಸ್ಪತ್ರೆಗೆ ದಾಖಲಾಗಿದ್ದರು.ಅವರಿಗೆ ಯಾವ ಚಿಕಿತ್ಸೆ ನೀಡಲಾಯಿತು? ಅಪೋಲೋ ಆಸ್ಪತ್ರೆಯ ಯಾವ ವೈದ್ಯರ ತಂಡ ಅವರನ್ನು ನೋಡಿಕೊಳ್ಳುತ್ತಿತ್ತು ಎಂಬುದು ಕೂಡ ತಿಳಿದಿರಲಿಲ್ಲ ಎಂದಿದ್ದರು. ಜಯಲಲಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ನನಗೆ ರಾಜ್ಯ ಆರೋಗ್ಯ ಕಾರ್ಯದರ್ಶಿಯಿಂದ ಮಾಹಿತಿ ಸಿಕ್ಕಿತ್ತು ಎಂದಿದ್ದರು.

ಜಯಲಲಿತಾ ಅವರೊಂದಿಗೆ ನೆರಳಿನಂತಿದ್ದ ಅವರ ಸಹಾಯಕಿ ಶಶಿಕಲಾ ಮತ್ತು ಅವರ ಕುಟುಂಬ ಸದಸ್ಯರು ಈ ವಿಷಯದಲ್ಲಿ ಬಹಳಷ್ಟು ವಿಚಾರ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು.ಇದೀಗ ಈ‌ ಕುರಿತ ಸುದೀರ್ಘ ವರದಿಯನ್ನು ಆಯೋಗ ತನಿಖೆ ನಡೆಸಿ ಸರಕಾರಕ್ಕೆ ಸಲ್ಲಿಕೆ‌ ಮಾಡಿದೆ.

ಟಾಪ್ ನ್ಯೂಸ್