ಇನ್ಶುರೆನ್ಸ್​ ಹಣಕ್ಕಾಗಿ ಮಗಳನ್ನು 43 ಬಾರಿ ಆಸ್ಪತ್ರೆಗೆ ಸೇರಿಸಿದ ಖತರ್ನಾಕ್ ತಾಯಿ; ಈಕೆ ಆರೋಗ್ಯವಂತೆ ಮಗಳಿಗೆ ಔಷಧಿ ಕೊಟ್ಟು ಏನೇನು ಮಾಡುತ್ತಿದ್ದಳು ಗೊತ್ತಾ?

ಆರೋಗ್ಯವಂತ 8 ವರ್ಷದ ಮಗಳನ್ನು ಅನಾರೋಗ್ಯದ ಹೆಸರಲ್ಲಿ 43 ಬಾರಿ ಆಸ್ಪತ್ರೆಗೆ ಸೇರಿಸಿ ತಾಯಿ ಲಕ್ಷಾಂತರ ರೂ.ಇನ್ಸೂರೆನ್ಸ್ ಹಣ ಮಾಡಿರುವ ಘಟನೆ ವರದಿಯಾಗಿದೆ.




ಈ ಆಘಾತಕಾರಿ ಘಟನೆ ಜಪಾನ್​ನ ಒಸಾಕಾ ಪ್ರಾಂತ್ಯದಲ್ಲಿ ನಡೆದಿದೆ.ಕಸುಮಿ ನವಾಟಾ ಎಂಬ ಮಹಿಳೆ ವಿಮೆ ಹಣ ಪಡೆಯಲು ತನ್ನ ಮಗಳನ್ನು ಅನಾರೋಗ್ಯ ಎಂದು ಸುಳ್ಳು ಹೆಸರಲ್ಲಿ ಪದೇ ಪದೇ ಆಸ್ಪತ್ರೆಗೆ ದಾಖಲಿಸುತ್ತಿದ್ದಳು.

ಹಣದ ದುರಾಸೆಯಿಂದ ಸ್ವಂತ ಮಗಳನ್ನೆ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾಳೆ.ಮಗುವಿಗೆ ಅನಾರೋಗ್ಯವಿಲ್ಲದಿದ್ದರೂ ಆಹಾರ ನೀಡದೆ ಮತ್ತು ವಿವಿಧ ಔಷಧಿಗಳನ್ನು ಕೊಡುತ್ತಿದ್ದಳು.

ಇದರಿಂದ ಬಾಲಕಿ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ವಿಮೆ ಹಣವನ್ನು ಕ್ಲೇಮ್ ಮಾಡಿಕೊಳ್ಳುತ್ತಿದ್ದಳು.

ಪೊಲೀಸರ ತನಿಖೆಯಲ್ಲಿ ಕಸುಮಿ ನವಾಟಾ ತನ್ನ ಮಗಳನ್ನು 2018 ರಿಂದ 43 ಬಾರಿ ಆಸ್ಪತ್ರೆಗೆ ದಾಖಲಿಸಿದ್ದಾಳೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ 5.7 ಮಿಲಿಯನ್ ಯೆನ್, ಅಂದರೆ ಸುಮಾರು 33 ಲಕ್ಷ ರೂಪಾಯಿಯನ್ನು ಕ್ಲೈಮ್ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಕಸುಮಿ ನವಾಟಾ, ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಮಗಳಿಗೆ ಆರೋಗ್ಯ ವಿಮೆ ಮಾಡಿಸಿದ್ದಳು. ಆಗಾಗ ಮಗುವನ್ನು ಆಸ್ಪತ್ರೆಗೆ ಸೇರಿಸುತ್ತಿದ್ದರು. ಮಗುವಿಗೆ ಆಹಾರವನ್ನು ನೀಡದೆ, ಮಾತ್ರೆಗಳನ್ನು ನೀಡಿದ ಪರಿಣಾಮವಾಗಿ,ಮಗುವಿಗೆ ಕೆಟೋಟಿಕ್ ಹೈಪೊಗ್ಲಿಸಿಮಿಯಾ ಕಾಣಿಸಿಕೊಂಡಿದೆ. ಆದರೆ ಇನ್ಶೂರೆನ್ಸ್ ಹಣ ಬಂದಾಗ ಆಕೆ ಮಗಳಿಗೆ ಚಿಕಿತ್ಸೆ ಕೊಡಿಸುವ ಬದಲು ಬಾಯ್ ಫ್ರೆಂಡ್ ಜೊತೆ ಟೂರ್ ಹೋಗಿದ್ದಾಳೆ. ಆಕೆಯ ಸೆಲ್ ಫೋನ್‌ನಲ್ಲಿಯೂ ಇದಕ್ಕೆ ಸಂಬಂಧಿಸಿದ ಸಂದೇಶಗಳು ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.

5 ವರ್ಷಗಳಲ್ಲಿ ಬಾಲಕಿಯನ್ನು 332 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿದ್ದಾಳೆ.ಇದರೊಂದಿಗೆ ಆರೋಗ್ಯ ವಿಮೆಯಡಿ 3 ವಿಮಾ ಕಂಪನಿಗಳಿಂದ ಸುಮಾರು 33 ಲಕ್ಷ ರೂಪಾಯಿ ಕ್ಲೈಮ್ ಮಾಡಿದ್ದಾಳೆ ಎಂದು ತಿಳಿದುಬಂದಿದೆ.




ಟಾಪ್ ನ್ಯೂಸ್