ಚಿತ್ತೂರಿನಲ್ಲಿ ಜಲ್ಲಿಕಟ್ಟು ಆಟದ ವೇಳೆ ಯುವಕರಿಗೆ ತಿವಿದ ಗೂಳಿಗಳು, 15 ಮಂದಿಗೆ ಗಂಭೀರ ಗಾಯ

ವಿಶಾಖಪಟ್ಟಣಂ:ಮಕರ ಸಂಕ್ರಾಂತಿಯಂದು ಆಂಧ್ರಪ್ರದೇಶದಲ್ಲಿ ಭಾರೀ ಅವಘಡ ನಡೆದಿದೆ.ಚಿತ್ತೂರಿನಲ್ಲಿ ಜಲ್ಲಿಕಟ್ಟು ಆಟದಲ್ಲಿ 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಕರ ಸಂಕ್ರಾಂತಿ ಹಿನ್ನೆಲೆ ಚಿತ್ತೂರಿನಲ್ಲಿ ಜಲ್ಲಿಕಟ್ಟು ಆಯೋಜಿಸಲಾಗಿತ್ತು, ಅಲ್ಲಿ ಅನೇಕ ಯುವಕರು ಕ್ರೀಡೆಗೆ ಸೇರಿಕೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಲ್ಲಿಕಟ್ಟು ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳ ಆಯೋಜಕರಿಗೆ ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದರು.

ರಭಸವಾಗಿ ಬರುತ್ತಿದ್ದ ಗೂಳಿಗಳು ಯುವಕರಿಗೆ ತುವಿದು, ಗುದ್ದಿಕೊಂಡು ಓಡಿ ಹೋಗಿವೆ ಎಂದು ಹೇಳಲಾಗಿದೆ. ಗೂಳಿಯಿಂದ ಗಾಯಗೊಂಡವರನ್ನ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಜಲ್ಲಿಕಟ್ಟು ತಮಿಳುನಾಡು ಮತ್ತು ಆಂಧ್ರದಲ್ಲಿ ಹೆಚ್ಚು ಉತ್ಸಾಹದಿಂದ ನಡೆಸುವ ಕ್ರೀಡೆಯಾಗಿದೆ.

ಟಾಪ್ ನ್ಯೂಸ್