ಕೃಷ್ಣಾಪುರದಲ್ಲಿ ಹತ್ಯೆಯಾಗಿದ್ದ ಜಲೀಲ್ ಕುಟುಂಬಕ್ಕೆ ಪ್ಲ್ಯಾಟ್ ಹಸ್ತಾಂತರ

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೃಷ್ಣಾಪುರದ
ಅಬ್ದುಲ್ ಜಲೀಲ್‌ರ ಕುಟುಂಬಕ್ಕೆ ದಾನಿಗಳ ಹಾಗೂ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ಪ್ಲ್ಯಾಟ್ ಖರೀದಿಸಿ ಹಸ್ತಾಂತರ ಮಾಡಲಾಗಿದೆ.

ದಾನಿಗಳ ಹಾಗೂ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸಹಾಯದಿಂದ ಖರೀದಿಸಲಾದ ಫ್ಲ್ಯಾಟನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ನೇತೃತ್ವದಲ್ಲಿ ಹಸ್ತಾಂತರ ಕಾರ್ಯ ನಡೆದಿದೆ.

ಈ ಸಂದರ್ಭ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಸಿ.ಮೆಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ ಎಂ. ಮುಮ್ತಾಝ್ ಅಲಿ, ಹಾಜಿ ಎಸ್.ಎಂ. ರಶೀದ್, ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸೇರಿ ಮುಸ್ಲಿಂ‌ ಕಮಿಟಿಯ ನಾಯಕರು ಹಾಗೂ ದಾನಿಗಳು ಉಪಸ್ಥಿತರಿದ್ದರು.

ಕಳೆದ ಡಿಸೆಂಬರ್ ನಲ್ಲಿ ಕೃಷ್ಣಾಪುರದಲ್ಲಿ ಅಂಗಡಿಯ ಮುಂದೆಯೇ ಚೂರಿಯಿಂದ ಇರಿದು ಜಲೀಲ್ ಎಂಬವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು.ಪ್ರಕರಣ ಕರಾವಳಿ ಸೇರಿ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಅಮಾಯಕನ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಅಂದಿನ ಸರಕಾರಕ್ಕೆ ಆಗ್ರಹಿಸಲಾಗಿತ್ತು.

ಟಾಪ್ ನ್ಯೂಸ್