ಬುರ್ಖಾಧಾರಿ ಮಹಿಳೆಗೆ ಗನ್ ತೋರಿಸಿ “ಜೈ ಮಾತಾ ದಿ” ಹೇಳುವಂತೆ ಬಲವಂತ ಮಾಡಿದ್ದ ಪೇದೆ

ಬುರ್ಖಾಧಾರಿ ಮಹಿಳೆಗೆ ಗನ್ ತೋರಿಸಿ “ಜೈ ಮಾತಾ ದಿ” ಹೇಳುವಂತೆ ಬಲವಂತ ಮಾಡಿದ್ದ ಆರ್ ಪಿಎಫ್ ಪೇದೆ

ಮುಂಬೈ; ಜೈಪುರ –ಮುಂಬೈ ಎಕ್ಸ್ ಪ್ರೆಸ್ ವೇ ರೈಲಿನಲ್ಲಿ ನಾಲ್ವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಪ್ರಕರಣದ ತನಿಖೆ ವೇಳೆ ಮಹತ್ವದ ಅಂಶ ಬಹಿರಂಗವಾಗಿದೆ.ಹಂತಕ ಆರ್ ಪಿಎಫ್ ಪೇದೆ ಕೃತ್ಯಕ್ಕೆ ಮೊದಲು ರೈಲಿನಲ್ಲಿ ಬುರ್ಖಾಧಾರಿ ಮಹಿಳೆಗೆ “ಜೈ ಮಾತಾ ದಿ” ಎಂದು ಘೋಷಣೆ ಕೂಗುವಂತೆ ಆಗ್ರಹಿಸಿದ್ದಾನೆ ಎಂದು ತನಿಖೆಯ ವೇಳೆ ಬಯಲಾಗಿದೆ.

ಪ್ರಕರಣದ ಕುರಿತು ತನಿಖೆ ನಡೆಸುವ ಬೊರಿವಲಿ ರೈಲ್ವೇ ಪೊಲೀಸರು, ಸಂತ್ರಸ್ತ ಮಹಿಳೆಯನ್ನು ಗುರುತಿಸಿ ಮಹಿಳೆಯಿಂದ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಮಹಿಳೆಯಿಂದ ಹೇಳಿಕ ಪಡೆದು ರೈಲಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾ ದೃಶ್ಯ ಕೂಡ ಪರಿಶೀಲಿಸಲಾಗಿದೆ.

ಹಂತಕ ಚೌಧರಿ ಬುರ್ಖಾ ಧರಿಸಿದ್ದ ಪ್ರಯಾಣಿಕ ಮಹಿಳೆಗೆ ಗನ್ ನ್ನು ತೋರಿಸಿ ಎರಡೆರಡು ಬಾರಿ “ಜೈ ಮಾತಾ ದಿ” ಎಂದು ಕೂಗುವಂತೆ ಒತ್ತಾಯಿಸಿದ್ದಾನೆ ಎಂದು ತನಿಖೆಯ ವೇಳೆ ಬಹಿರಂಗವಾಗಿದೆ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರಾದ ಅಬ್ದುಲ್ ಕಾದರ್ ಮೊಹಮ್ಮದ್ ಹುಸೇನ್ ಭಾನ್‌ಪುರವಾಲಾ,ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಆರ್ ಪಿಎಫ್ ಪೇದೆ ಹತ್ಯೆ ಮಾಡಿದ್ದ.

ಟಾಪ್ ನ್ಯೂಸ್