ವ್ಯಕ್ತಿಯನ್ನು ಥಳಿಸಿ ಹತ್ಯೆ; ರೈಲ್ವೇ ನಿಲ್ಧಾಣದಲ್ಲೇ ನಡೆದ ಘಟನೆ

ಜೈಪುರ; ಜಗತ್ಪುರ ರೈಲ್ವೇ ಸ್ಟೇಷನ್‌ನಲ್ಲಿ 50 ವರ್ಷದ ವ್ಯಕ್ತಿಯನ್ನು ಥಳಿಸಿ ಗುಂಪೊಂದು ಹತ್ಯೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.

ಜವಾಹರ್ ಸರ್ಕಲ್ ಸ್ಟೇಷನ್ ಹೌಸ್ ಆಫೀಸರ್ ಅರವಿಂದ್ ಚರಣ್ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದು, ಚಂದ್ರೇಶ್ ಮೀನಾ ಎಂಬವರ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದೆ. ರೈಲು ಸೀಟಿನ ವಿಚಾರದಲ್ಲಿ ಬಸ್ಸಿ ಮೂಲದ ಚಂದ್ರೇಶ್ ಮೀನಾ ಅವರಿಗೆ ರೈಲಿನಲ್ಲಿ ಕೆಲವರ ಜೊತೆ ಜಗಳವಾಗಿತ್ತು. ಬಳಿಕ ರೈಲ್ವೆ ನಿಲ್ಧಾಣದಲ್ಲಿ ಚಂದ್ರಶ್ ಮೀನಾ ಅವರು ಇಳಿದಾಗ ಜಿತೇಂದ್ರ ಮೀನಾ ಮತ್ತು ಆತನ ಸಹಚರರು ಆತನನ್ನು ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿದ್ದ ಚಂದ್ರೇಶ್ ಮೀನಾಗೆ ಪೊಲೀಸರು ಜೈಪುರಿಯಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಕೃತ್ಯದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಜಿತೇಂದ್ರ ಮೀನಾ ಹಾಗೂ ಆತನ ಸಹಚರರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಬಂಧನಕ್ಕಾಗಿ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಯ ಪರಿಶೀಲನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಟಾಪ್ ನ್ಯೂಸ್