ಬೆಳಗಾವಿ; ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ನಾಪತ್ತೆ ಪ್ರಕರಣ ವಿಭಿನ್ನ ತಿರುವ ಪಡೆದುಕೊಂಡಿದ್ದು ಜೈನ ಮುನಿಗಳ ಕೊಲೆ ನಡೆದಿರುವ ಬಗ್ಗೆ ವರದಿಯಾಗಿದೆ.
ಆಶ್ರಮದ ರೂಂನಿಂದ ಏಕಾಏಕಿ ಮುನಿಗಳು ಕಾಣೆಯಾಗಿದ್ದರು.ಇದೀಗ ತನಿಖೆಯ ವೇಳೆ ಅವರ ಹತ್ಯೆಯಾದ ವಿಚಾರ ಬೆಳಕಿಗೆ ಬಂದಿದೆ.
ಈ ಕುರಿತು ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಸತ್ಯ ಬಾಯ್ಬಿಡಿಸಿದಾಗ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೊಲೆಗಡುಕರು ಮುನಿಗಳಿಗೆ ಆಪ್ತರಾಗಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ.ಮುನಿಗಳ ಜೊತೆ ಉತ್ತಮ ಒಡೆನಾಟ ಹೊಂದಿದ್ದರು. ಜೈನಮುನಿಗಳು ಇವರ ಮೇಲೆ ಸಾಕಷ್ಟು ವಿಶ್ವಾಸ ಇಟ್ಟಿದ್ದು, ಇವರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಇದನ್ನು ಮರುಪಾವತಿ ವಿಚಾರದಲ್ಲಿ ಕೊಲೆ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಘಟನೆಯಿಂದ ಆಶ್ರಮದಲ್ಲಿ ಭಕ್ತಾದಿಗಳು ಕಣ್ಣೀರಿಡುತ್ತಿದ್ದು,ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.