30ಕೋಟಿ ಆಸ್ತಿ ಇದ್ದರೂ ಮೂರು ಹೊತ್ತಿನ ಊಟ ಹಾಕದ ಮಗ; ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ

ಕೋಟ್ಯಾದೀಶ ಮಗನೋರ್ವ ಮೂರು ಹೊತ್ತಿನ ಊಟ ಹಾಕಿಲ್ಲ ಎಂದು ಮನನೊಂದು ಹೆತ್ತು ಬೆಳೆಸಿದ ಪೋಷಕರು‌ ಆತ್ಮಹತ್ಯೆ ಮಾಡಿಕೊಂಡ ದಯಾನೀಯ ಘಟನೆ
ಹರಿಯಾಣದಲ್ಲಿ ನಡೆದಿದೆ.

ಹರಿಯಾಣದ ಚರ್ಕಿ ದಾದ್ರಿಯಲ್ಲಿರುವ ಶಿವ ಕಾಲೋನಿಯ ನಿವಾಸದಲ್ಲಿ ಜಗದೀಶ್‌ ಚಂದ್ರ ಆರ್ಯ (78) ಹಾಗೂ ಭಾಗ್ಲಿ ದೇವಿ (77) ಅವರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಟುಂಬ ಸದಸ್ಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್​ನೋಟ್​ ಬರೆದಿದ್ದಾರೆ.ಇದರ ಜೊತೆಗೆ ಆತ್ಮಹತ್ಯೆಗೆ ಮೊದಲು
ನಿಯಂತ್ರಣ ಕೊಠಡಿಗೆ ಕರೆ ಮಾಡಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ದಂಪತಿ ತಮ್ಮ ಮಗ ಮಹೇಂದರ್‌ನೊಂದಿಗೆ ಬಾಧ್ರಾದಲ್ಲಿ ವಾಸಿಸುತ್ತಿದ್ದರು. ಆದರೆ ಆರು ವರ್ಷಗಳ ಹಿಂದೆ ಅವರು ನಿಧನರಾದಾಗ ತಮ್ಮ ಸೊಸೆ ನೀಲಂ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಸೊಸೆ ಇವರನ್ನು ವೃದ್ಧಾಶ್ರಮದಲ್ಲಿ ಇರಿಸಿದ್ದರು.

ಇನ್ನು ದಂಪತಿಗೆ 30 ಕೋಟಿ ರೂ.ಆಸ್ತಿ ಇರುವ ಇನ್ನೊಬ್ಬ ಮಗ ಇದ್ದಾನೆ.ಅವನು ಹೆತ್ತವರಿಗೆ ಕರೆದು ಊಟವನ್ನೂ ಹಾಕುತ್ತಿರಲಿಲ್ಲ.ಅವರನ್ನು ನೋಡಿಕೊಳ್ಳುತ್ತಲೂ ಇರಲಿಲ್ಲ. ಇದರಿಂದ ನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com