ಇಝರ್ ಅಖ್ತರ್, ಪತ್ನಿ ಮುಂತಾ ಬೇಗಂ, ಅತ್ತೆ ಖೈರುಲ್ ನೆಸ್ಸಾ ಮೃತರು
ಪಶ್ಚಿಮಬಂಗಾಳ:ವಿದ್ಯುತ್ ಶಾಕ್ ಹೊಡೆದು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಕೋಲ್ಕತ್ತಾದ ಎಕ್ಬಾಲ್ಪೋರ್ ಪ್ರದೇಶದಲ್ಲಿ ನಡೆದಿದೆ.
ಇಝರ್ ಅಖ್ತರ್, ಪತ್ನಿ ಮುಂತಾ ಬೇಗಂ, ಅತ್ತೆ ಖೈರುಲ್ ನೆಸ್ಸಾ ಮೃತರು.
ಇಝರ್ ಅಖ್ತರ್ ಎಂಬವರು ಗೋಡೆಯೊಂದರ ಮೇಲೆ ಇದ್ದ
ಲೋಹದ ತಂತಿಯಲ್ಲಿ ಬಟ್ಟೆಯನ್ನು ಹಾಕಲು ಹೋಗಿದ್ದರು. ಈ ವೇಳೆ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ.ಇದನ್ನು ಕಂಡು ಆತನನ್ನು ರಕ್ಷಿಸಲು ಆತನ ಪತ್ನಿ ಮುಂತಾ ಬೇಗಂ ಹಾಗೂ ಅತ್ತೆ ಖೈರುಲ್ ನೆಸ್ಸಾ ಓಡಿ ಬಂದಿದ್ದು ಈ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದಿದೆ.
ಮೂವರನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಗಿದೆ. ಪತ್ನಿ ಹಾಗೂ ಅತ್ತೆ ಇಬ್ಬರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಮೃತಪಟ್ಟಿದ್ದು ಗಂಭೀರ ಗಾಯಗೊಂಡಿದ್ದ ಇಝರ್ ಅಖ್ತರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಕೋಲ್ಕತ್ತಾದ ಎಸ್‌ಎಸ್‌ಕೆಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ
ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಬಿಟ್ಟು ಕೊಡಲಾಗಿದೆ.
ತೂಗುಹಾಕಿದ್ದ ಲೋಹದ ತಂತಿಯ ಮೂಲಕ ವಿದ್ಯುತ್ ಹರಿದು ದುರ್ಘಟನೆ ನಡೆದಿದೆ ಎನ್ನುವುದು ತನಿಖೆಯ ವೇಳೆ ತಿಳಿದು ಬಂದಿದೆ.ಒಂದೇ ಕುಟುಂಬದ ಮೂವರ ಸಾವಿನಿಂದ ಇದೀಗ ಕುಟುಂಬದ ರೋಧನ ಮುಗಿಲು ಮುಟ್ಟಿದೆ.