ಪುರುಷ ಮತ್ತು ಮಹಿಳೆಯ ಮಿಲನವಿಲ್ಲದೆ ಭ್ರೂಣವನ್ನು ಸೃಷ್ಟಿಸಿ ಆ ಮೂಲಕ ಮಕ್ಕಳು ಹುಟ್ಟಬಹುದು ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.
ಜೀವಂತ ಕೋಶವಿಲ್ಲದೆ ಮಾನವ ಭ್ರೂಣವನ್ನು ಕೃತಕ ಭ್ರೂಣವನ್ನು ರಚಿಸುವ ಮೂಲಕವಾಗಿ ಇಸ್ರೇಲಿ ವಿಜ್ಞಾನಿಗಳು ಪವಾಡ ಮಾಡಿದ್ದಾರೆ.
ಇಸ್ರೇಲಿನ ವೈಜ್ಮಾನ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳ ತಂಡವು ಅಂಡಾಣು ಮತ್ತು ವಿರ್ಯಾಣುವಿನ ಸಹಾಯವಿಲ್ಲದೆ ಭ್ರೂಣ ಮಾದರಿಯೊಂದನ್ನು ತಯಾರಿಸಿದೆ.
ವಿಜ್ಞಾನಿಗಳ ತಂಡ ತಯಾರಿಸಿರುವ ಈ ಭ್ರೂಣ ಮಾದರಿಯನ್ನು 14 ದಿನಗಳ ಕಾಲ ಇರಿಸಲಾಗಿತ್ತು. ಈ ಭ್ರೂಣ ಮಾನವ ಭ್ರೂಣವನ್ನು ಹೋಲುತ್ತದೆ. ಭ್ರೂಣವನ್ನು ಪ್ರಾಯೋಗಲಯದಲ್ಲಿ ಬೆಳೆಸಿದ ಕಾಂಡ ಕೋಶಗಳಿಂದ ಸೃಷ್ಠಿಸಲಾಗಿದ್ದು, ಹಾರ್ಮೋನ್ ಕೂಡ ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಈ ಭ್ರೂಣ ಮಾದರಿಯನ್ನು ಅಭಿವೃದ್ಧಿ ಪಡಿಸಲು ವಿಜ್ಞಾನಿಗಳು ವೀರ್ಯ, ಅಂಡಾಣು ಅಥವಾ ಗರ್ಭಾಶಯವನ್ನು ಬಳಸಿಲ್ಲ ಎನ್ನಲಾಗಿದೆ.
ಈ ಭ್ರೂಣದ ಮಾದರಿಯು ಜರಾಯು, ಹಳದಿ ಚೀಲ, ಕೊರಿಯಾನಿಕ್ ಚೀಲ ಮತ್ತು ಇತರ ಬಾಹ್ಯ ಅಂಗಾಂಶಗಳನ್ನು ಒಳಗೊಂಡು ವಿಶಿಷ್ಟವಾಗಿರುವ ಎಲ್ಲ ರಚನೆಗಳು, ವಿಭಾಗಗಳನ್ನು ಹೊಂದಿದೆ.ಇದು ಭ್ರೂಣದ ಕ್ರಿಯಾತ್ಮಕ ಮತ್ತು ಅಗತ್ಯ ಬೆಳವಣಿಗೆಯನ್ನು ಖಚಿತಪಡಿಸುತ್ತದೆ ಎಂದು ವಿಜ್ಞಾನಿಗಳ ತಂಡವು ಹೇಳಿದೆ.