ಇರಾನ್ ನಲ್ಲಿ ಮಹಿಳೆಯರು ಸೇರಿ 500 ಕ್ಕೂ ಅಧಿಕ ಮಂದಿಗೆ ಗಲ್ಲು ಶಿಕ್ಷೆ; ಶಾಕಿಂಗ್ ರಿಪೋರ್ಟ್

ಇರಾನ್;2022ರಲ್ಲಿ ಇರಾನ್ ಇದುವರೆಗೆ 500ಕ್ಕೂ ಹೆಚ್ಚು ಜನರನ್ನು ಗಲ್ಲಿಗೇರಿಸಿದೆ, ಇದು ಕಳೆದ ವರ್ಷಕ್ಕಿಂತ ಹೆಚ್ಚು ಎಂದು ಮಾನವ ಹಕ್ಕುಗಳ ಸಮಿತಿ ಸೋಮವಾರ ತಿಳಿಸಿದೆ.
ಮಾನವ ಹಕ್ಕುಗಳ‌ ಸಮಿತಿ ಈ ಬಾರಿ ಇರಾನ್ ನಲ್ಲಿ ಕನಿಷ್ಠ ಮಹಿಳೆಯರು ಸೇರಿ 504 ಜನರನ್ನು ಗಲ್ಲಿಗೇರಿಸಲಾಗಿದೆ ಎಂದು ಹೇಳಿದ್ದು, ಹೆಚ್ಚುವರಿ ಪ್ರಕರಣಗಳನ್ನು ಖಚಿತಪಡಿಸಲು ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ.

ಸೆಪ್ಟೆಂಬರ್‌ನಿಂದ ಇರಾನ್‌ನಲ್ಲಿ ಭುಗಿಲೆದ್ದ ಆಡಳಿತ-ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಜನರ ವಿರುದ್ಧ ಅಧಿಕಾರಿಗಳು ಮರಣದಂಡನೆ ಅಸ್ತ್ರವನ್ನು ವ್ಯಾಪಕವಾಗಿ ಬಳಸುತ್ತಾರೆ ಎಂದು ಟೀಕೆ ವ್ಯಕ್ತವಾಗಿದೆ.

ಅಮಾನವೀಯ ಮತ್ತು ಕ್ರೂರ ಮರಣದಂಡನೆಯನ್ನು ಮಾನವ ಹಕ್ಕುಗಳ ಸಂಘಟನೆಯು ಖಂಡಿಸಿದ್ದು, ರಾಜಕೀಯ ಕೈದಿಗಳ ವಿರುದ್ಧ ಭದ್ರತಾ ಸಂಬಂಧಿ ಆರೋಪಗಳನ್ನು ಹೊರಿಸಿ, ಮರಣ ದಂಡನೆ ವಿಧಿಸುವುದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ಕಳೆದ ವರ್ಷ ಇರಾನ್ 333 ಜನರನ್ನು ಗಲ್ಲಿಗೇರಿಸಿತ್ತು. ಈ ಪೈಕಿ 55 ಜನರನ್ನು ಅಧಿಕಾರಿಗಳ ಹೊರಿಸಿದ ಆರೋಪದ ಹಿನ್ನೆಲೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಅಂದರೆ, ಗಲ್ಲು ಶಿಕ್ಷೆಗಳನ್ನು ನ್ಯಾಯಾಲಯ ಘೋಷಿಸಿದ್ದಲ್ಲ. ಅದು ಅಧಿಕಾರಿಗಳ ಆದೇಶವಾಗಿತ್ತು.ಟಾಪ್ ನ್ಯೂಸ್

ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಕಾಫಿ ತಯಾರಿಸುವುದು ಪ್ರಾಣಿಯೊಂದರ ಮಲದಿಂದ!;ಅಚ್ಚರಿಯಾದರೂ ಇದು ವಾಸ್ತವ! ಈ ಕಾಫಿ ಬೆಲೆ ಎಷ್ಟಿದ ಗೊತ್ತಾ?

ಜಗತ್ತಿನ ಅತಿ ಬೆಲೆಯ ಕಾಫಿಯನ್ನು ಪ್ರಾಣಿಯೊಂದರ ಮಲದಿಂದ ತಯಾರಿಸುತ್ತಾರೆ ಎಂದರೆ ನೀವು ನಂಬಲೇ

ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಅನುಮಾನ ವ್ಯಕ್ತಪಡಿಸಿದ ಪೋಷಕರು

ರಾಯಚೂರು:ಕಾಲೇಜು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಕುಟುಂಬ

Developed by eAppsi.com