ಬೆಂಗಳೂರು;15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪಟ್ಟಿಯಲ್ಲಿ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಸಿ ಬಿ ರಿಷ್ಯಂತ್ ನೇಮಕ ಮಾಡಲಾಗಿದೆ.
ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಕ್ರಮ್ ಅಮ್ಟೆ ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿ ಬಿ ರಿಷ್ಯಂತ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು.
2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ರಿಷ್ಯಂತ್ ಅವರು ಈ ಹಿಂದೆ ದಾವಣಗೆರೆಯ ಎಸ್ಪಿ ಸೇರಿದಂತೆ ಹಲವೆಡೆ ಕೆಲಸ ಮಾಡಿದ್ದರು.
ವರ್ಗಾವಣೆ ಗೊಂಡ ಪೊಲೀಸ್ ಅಧಿಕಾರಿಗಳ ಪಟ್ಟಿ
ರಾಮಚಂದ್ರ ರಾವ್ (ಪೊಲೀಸ್ ಗೃಹ ನಿರ್ಮಾಣ ನಿಗಮದ ಎಡಿಜಿಪಿ)
2. ಮಾಲಿನಿ ಕೃಷ್ಣಮೂರ್ತಿ (ಬಂಧಿಖಾನೆ ಎಡಿಜಿಪಿ)
3. ಅರುಣ್ ಚಕ್ರವರ್ತಿ (ಡಿಸಿಆರ್ಇ, ಎಡಿಜಿಪಿ)
4. ಮನೀಷ್ ಕರ್ಬಿಕರ್ (ಸಿಐಡಿ, ಎಡಿಜಿಪಿ)
5. ಚಂದ್ರಶೇಖರ್ (ಐಎಸ್ಡಿ, ಎಡಿಜಿಪಿ)
6. ವಿಪುಲ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪೂರ್ವ ವಲಯ)
7. ಪ್ರವೀಣ್ ಮಧುಕರ್ ಪವಾರ್ (ಐಜಿಪಿ, ಸಿಐಡಿ)
8. ಸತೀಶ್ ಕುಮಾರ್ (ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು ನಗರ ಪಶ್ಚಿಮ ವಲಯ)
9. ಸಂದೀಪ್ ಪಾಟಿಲ್ (ಕೆಎಸ್ಆರ್ಪಿ, ಐಜಿಪಿ)
10. ವಿಕಾಸ್ ಕುಮಾರ್ ವಿಕಾಸ್ (ಐಎಎಸ್ಡಿ, ಐಜಿಪಿ)
11. ರಮಣ್ ಗುಪ್ತಾ (ಬೆಳಗಾವಿ ವಲಯ ಐಜಿಪಿ)
12. ಸಿದ್ದರಾಮಪ್ಪ (ಕೇಂದ್ರ ಕಚೇರಿ ಐಜಿಪಿ)
13. ಬೋರಲಿಂಗಯ್ಯ (ಮೈಸೂರು ವಲಯ ಡಿಐಜಿ)
14. ವಂಶಿಕೃಷ್ಣ (ಡಿಐಜಿ, ಸಿಐಡಿ)
15. ರಿಷ್ಯಂತ್ (ದಕ್ಷಿಣ ಕನ್ನಡ ಎಸ್ಪಿ)