ಐಪಿಎಸ್ ಅಧಿಕಾರಿ ರೂಪಾ& ರೋಹಿಣಿ ಸಿಂಧೂರಿ ಜಟಾಪಟಿ; ಮಗನ ಹೆಸರು ಉಲ್ಲೇಖದ ಬಗ್ಗೆ ಡಿ.ಕೆ ರವಿ ತಾಯಿ ಪ್ರತಿಕ್ರಿಯೆ…

ಬೆಂಗಳೂರು;ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಟಾಪಟಿ ಬೆನ್ನಲ್ಲೇ ಡಿ.ಕೆ ರವಿ ತಾಯಿ ಗೌರಮ್ಮ ಪ್ರತಿಕ್ರಿಯಿಸಿದ್ದಾರೆ. ‌

ಚನ್ನಪಟ್ಟಣದಲ್ಲಿ ಡಿ.ಕೆ.ರವಿ ತಾಯಿ ಗೌರಮ್ಮ ಮಾಧ್ಯಮಗಳೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ , ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಜಟಾಪಟಿಯಲ್ಲಿ ನನ್ನ ಮಗನ ಹೆಸರು ತಂದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನನ್ನ ಮಗ ಡಿ.ಕೆ. ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ. ಅವರಿಬ್ಬರು ಸ್ನೇಹಿತರು,‌ ಅವರು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲೂ ಸ್ನೇಹಿತರಾಗಿದ್ದರು. ಹಾಗಾಗ ನನಗೂ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರು ಇಷ್ಟಪಟ್ಟಿದ್ದರೆ ಆಗಲೇ ಇಬ್ಬರು ಮದುವೆ ಅಗಬಹುದಿತ್ತು.‌ ಅದಕ್ಕೆ ಯಾರ ವಿರೋಧವೂ ಇರಲಿಲ್ಲ. ಹಾಗಾಗಿ ಅವರ ಮೇಲೆ ಎನೂ ಹೇಳುವುದಿಲ್ಲ‌ ಎಂದು ಡಿ.ಕೆ.ರವಿ ತಾಯಿ ಗೌರಮ್ಮ‌ ಹೇಳಿದ್ದಾರೆ.

ಮಗನಿಗೆ ಇದ್ದಷ್ಟು ಅಧಿಕಾರ ನಿಮಗೂ ಇದೆ. ನಿಮ್ಮ‌ ಅಧಿಕಾರ ಬಳಸಿಕೊಂಡು ಜನರಿಗೆ ಉಪಕಾರ ಮಾಡಿ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಮೂಲ‌ಕ ಜೀವನ ರೂಪಿಸಿ. ನನ್ನ ಮಗ ನಡೆದ ದಾರಿಯಲ್ಲಿ ನಡೆಯಿರಿ‌ ಎಂದು ಡಿ.ಕೆ ರವಿ ತಾಯಿ ಹೇಳಿದ್ದಾರೆ‌.

ಟಾಪ್ ನ್ಯೂಸ್