ಕಲಬುರಗಿ;ಕಲಬುರ್ಗಿ ಐಪಿಎಸ್ ಅಧಿಕಾರಿ ಮತ್ತು ಮಹಿಳಾ ಎಎಸ್ವೈ ನಡುವಿನ ಅಕ್ರಮ ಸಂಬಂಧವನ್ನು ಪತಿ ಬಯಲು ಮಾಡಿದ್ದು ಇದೀಗ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದಿಯಾಗುತ್ತಿದೆ.
ಕಲಬುರ್ಗಿಯ ಐಎಸ್ ಡಿ ವಿಭಾಗದ ಎಸ್ಪಿಯಾಗಿರುವಂತ ಅರುಣ್ ರಂಗರಾಜನ್ ಕಲಬುರ್ಗಿಯಲ್ಲಿರುವಂತ ಪಿಡಬ್ಲ್ಯೂ ಡಿ ಕ್ವಾಟ್ರಾಸ್ ನಲ್ಲಿಯೇ ಮಹಿಳಾ ಎಎಸ್‌ಐ ಜೊತೆಗೆ ಆಕ್ಷೇಪಾರ್ಹ ರೀತಿಯಲ್ಲಿ ಪತಿಗೆ ಸಿಕ್ಕಿ ಬಿದ್ದಿದ್ದಾರೆ.
ಈ ಕುರಿತು ಎಎಸ್ ಐ ಪತಿ ಹೆಡ್ ಕಾನ್ಸ್ ಸ್ಟೇಬಲ್ ಪೊಲೀಸರಿಗೆ ದೂರು ನೀಡಿದ್ದಾರೆ.ಹೆಡ್ ಕಾನ್ಸ್ ಸ್ಟೇಬಲ್ ಕಂಟೆಪ್ಪ ನೀಡಿದ ದೂರಿನ ಆಧಾರ ಮೇಲೆ ಕಲಬುರ್ಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 , 324 , 498 , 376(2)(b), 342 , 504 , 506(2), 507, 420, 406, 500, 201, 109, 457 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.