ಆಯಪಲ್ ಐಫೋನ್‌ನ ತಯಾರಕ ಕಂಪೆನಿ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ ಭಾರತದಲ್ಲಿ ಹೊಸ ಪ್ಲಾಂಟ್‌ಗಾಗಿ 5700 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿರುವ ಬಗ್ಗೆ ವರದಿಯಾಗಿದೆ.
ಬ್ಲೂಮ್‌ಬರ್ಗ್ ಈ ಕುರಿತು ವರದಿ ಮಾಡಿದ್ದು, ತೈವಾನ್ ಕಂಪನಿಯು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಯ 300 ಎಕರೆ ಪ್ರದೇಶದಲ್ಲಿ ಐಫೋನ್ ಬಿಡಿಭಾಗಗಳನ್ನು ತಯಾರಿಸಲಿದ್ದು ಮತ್ತು ಅದು ಇನ್ನೂ ಪ್ರಾರಂಭಿಕ ಹಂತದಲ್ಲಿರುವ ಎಲೆಕ್ನಿಕ್ ವಾಹನದ ಮಹತ್ವಾಕಾಂಕ್ಷೆಗಳಿಗೆ ಸಹಾಯ ಮಾಡಲಿದೆ ಎಂದು ಹೇಳಿದೆ.
ಬೆಂಗಳೂರಿನ ಬಳಿ ನಿರ್ಮಾಣ ಆಗಲಿರುವ ಘಟಕದ ಮೂಲಕ ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.