ಕುಂದಾಪುರ:ಕುಂದಾಪುರ ಮೂಲದ ಯುವಕನೋರ್ವ ಬೆಂಗಳೂರಿನ ಕೆ.ಪಿ.ಅಗ್ರಹಾರದಲ್ಲಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಬೆದ್ರಳ್ಳಿಯ ಅಮರ್ ಶೆಟ್ಟಿ (30) ಮೃತ ಯುವಕ.
ಅಮರ್ ಶೆಟ್ಟಿ ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದ.ಆ.13ರಂದು ಕೆ.ಪಿ.ಅಗ್ರಹಾರದ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭ ಜ್ವರ ಎಂದು
ಕ್ಲಿನಿಕ್ ಗೆ ತೆರಳಿದ್ದ.ಅಲ್ಲಿ ಜ್ವರ ಎಂದು ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಇಂಜೆಕ್ಷನ್ ನೀಡಿದ್ದ ಸೊಂಟದ ಭಾಗ ಊದಿಕೊಂಡು, ನೋವು ಕಾಣಿಸಿಕೊಂಡಿದೆ.ಇದರಿಂದ ಮತ್ತೆ ಅಮರ್ ಶೆಟ್ಟಿ ಆಗಸ್ಟ್ 15ರಂದು ರಾಜಾಜಿನಗರದ ತಮ್ಮ ರೂಮಿನ ಪಕ್ಕದ ಕ್ಲಿನಿಕ್ ನಿಂದ ಔಷಧಿ ಪಡೆದಿದ್ದರು.ಆದರೂ ನೋವು ಕಡಿಮೆಯಾಗಿರಲಿಲ್ಲ.
ಕೊನೆಗೆ ಆಗಸ್ಟ್ 16ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಇಂಜೆಕ್ಷನ್ ಅಡ್ಡ ಪರಿಣಾಮದಿಂದಿಂದ ಮಲ್ಟಿ ಆರ್ಗನ್ ಡಿಸ್ ಫಂಕ್ಷನ್ ಆಗಿದೆ ಎಂದು ಕುಟುಂಬಿಕರಿಗೆ ತಿಳಿಸಿದ್ದರು.ಶುಕ್ರವಾರ ಸಂಜೆ ಅಮರ್ ಶೆಟ್ಟಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.