ವಿವಾಹಕ್ಕೆ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಒಂದು ವರ್ಷ ಜೈಲು ಶಿಕ್ಷೆ!; ವ್ಯಭಿಚಾರದ ವಿರುದ್ಧ ಸಂಸತ್ತಿನಲ್ಲಿ ಕಠಿಣ ಕಾನೂನು ಜಾರಿಗೆ ಮುಂದಾದ ಸರಕಾರ!

ಜಕಾರ್ತ:ಮದುವೆಗೂ ಮೊದಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಕಠಿಣ ಶಿಕ್ಷೆ ವಿಧಿಸುವ ಸಲುವಾಗಿ ಇಂಡೋನೇಷ್ಯಾ ಸಂಸತ್ತು ಹೊಸ ಕ್ರಿಮಿನಲ್​ ಕೋಡ್​ ಜಾರಿಗೆ ತರಲು ಮುಂದಾಗಿದೆ.
ಕ್ರಿಮಿನಲ್​ ಕೋಡ್​ ಕರಡು ಇಂಡೋನೇಷ್ಯಾ ಸಂಸತ್ತಿನಲ್ಲಿ ಮಂಡನೆಯಾಗಿ ಅಂಗೀಕಾರವಾಗಲಿದೆ.ಪತಿ ಅಥವಾ ಪತ್ನಿಯಲ್ಲದ ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ‌ ನಡೆಸಿದರೆ
ವ್ಯಭಿಚಾರದ ಅಡಿಯಲ್ಲಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅಥವಾ ವರ್ಗ II ರ ಅಡಿಯಲ್ಲಿ ಗರಿಷ್ಠ ದಂಡವನ್ನು ವಿಧಿಸಲು ಕಾನೂನು ಮಂಡನೆಗೆ ಇಂಡೋನೇಷ್ಯಾ ಸರಕಾರ ಮುಂದಾಗಿದೆ.

ಈ ಪ್ರಕರಣದಲ್ಲಿ ಸಂತ್ರಸ್ತ ಅಥವಾ ಸಂತ್ರಸ್ತೆ ದೂರು ನೀಡಿದ ಬಳಿಕ ಈ ಕಾನೂನು ಅನ್ವಯವಾಗದೆ.ಮದುವೆಯಾಗದ ಮಕ್ಕಳ ವಿರುದ್ಧ ಪಾಲಕರು ವಿವಾಹಪೂರ್ವ ಲೈಂಗಿಕ ಸಂಬಂಧದ ಬಗ್ಗೆ ದೂರು ನೀಡಿದರೆ, ಕ್ರಮ ಕೈಗೊಳ್ಳಲಾಗುತ್ತದೆ.
ಮೂರು ವರ್ಷಗಳ ಹಿಂದೆಯೇ ಮಸೂದೆಯನ್ನು ಮಂಡಿಸಬೇಕಾಗಿತ್ತು. ಆದರೆ, ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿತ್ತು.ಇದೀಗ ಮತ್ತೊಮ್ಮೆ ಜಾರಿಗೆ ತರುವ ಪ್ರಯತ್ನಕ್ಕೆ ಮುಂದಾಗಿದ್ದು, ಮತ್ತೆ ಪ್ರತಿಭಟನೆ ಸಾಧ್ಯತೆ ಇದೆ.

ಇಂಡೋನೇಷ್ಯಾದ ಮೌಲ್ಯಗಳಿಗೆ ಅನುಗುಣವಾಗಿ ಕ್ರಿಮಿನಲ್
ಕೋಡ್ ನ್ನು ತರಲು ನಾವು ಹೆಮ್ಮೆಪಡುತ್ತೇವೆ ಎಂದು ಇಂಡೋನೇಷ್ಯಾದ ಉಪ ಕಾನೂನು ಸಚಿವ ಎಡ್ವರ್ಡ್ ಒಮರ್ ಷರೀಫ್ ಹಿಯಾರಿಜ್ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.ಟಾಪ್ ನ್ಯೂಸ್

ಜಗತ್ತಿನ ಅತ್ಯಂತ ದುಬಾರಿ ಬೆಲೆಯ ಕಾಫಿ ತಯಾರಿಸುವುದು ಪ್ರಾಣಿಯೊಂದರ ಮಲದಿಂದ!;ಅಚ್ಚರಿಯಾದರೂ ಇದು ವಾಸ್ತವ! ಈ ಕಾಫಿ ಬೆಲೆ ಎಷ್ಟಿದ ಗೊತ್ತಾ?

ಜಗತ್ತಿನ ಅತಿ ಬೆಲೆಯ ಕಾಫಿಯನ್ನು ಪ್ರಾಣಿಯೊಂದರ ಮಲದಿಂದ ತಯಾರಿಸುತ್ತಾರೆ ಎಂದರೆ ನೀವು ನಂಬಲೇ

ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಅನುಮಾನ ವ್ಯಕ್ತಪಡಿಸಿದ ಪೋಷಕರು

ರಾಯಚೂರು:ಕಾಲೇಜು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಬಗ್ಗೆ ಕುಟುಂಬ

Developed by eAppsi.com