ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬಂದ ಭಾರತ; ಭಾರತದ ಜನಸಂಖ್ಯೆ ಕುರಿತು ಇಲ್ಲಿದೆ ಕೆಲ ಇಂಟ್ರಿಸ್ಟಿಂಗ್ ಅಂಕಿ- ಅಂಶಗಳು…

ನವದೆಹಲಿ:ಭಾರತವು ಇದೇ ಮೊದಲ‌ ಬಾರಿಗೆ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಚೀನಾದ ಜನಸಂಖ್ಯೆ ಇದೀಗ 142.57 ಕೋಟಿಯಷ್ಟಿದ್ದರೆ, ಭಾರತದ ಜನಸಂಖ್ಯೆ 142.86 ಕೋಟಿಯಷ್ಟಾಗಿದೆ. 1960ರಿಂದ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಕುಸಿತ ಕಂಡಿದೆ.

ವರದಿಯ ಪ್ರಕಾರ, ಭಾರತವು ಈಗ ಚೀನಾಕ್ಕಿಂತ 2.9 ಮಿಲಿಯನ್ ಹೆಚ್ಚು ಜನರನ್ನು ಹೊಂದಿರುವ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.

‘ದಿ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್, 2023’ ಎಂಬ ಶೀರ್ಷಿಕೆಯ ‘8 ಬಿಲಿಯನ್ ಲೈವ್ಸ್, ಇನ್‌ಫೈನೈಟ್ ಪಾಸಿಬಿಲಿಟೀಸ್: ದಿ ಕೇಸ್ ಫಾರ್ ರೈಟ್ಸ್ ಅಂಡ್ ಚಾಯ್ಸ್’ ಎಂಬ ವರದಿ ಬುಧವಾರ ಬಿಡುಗಡೆ ಮಾಡಿದ್ದು, ಭಾರತದ ಜನಸಂಖ್ಯೆ 1,428.6 ಮಿಲಿಯನ್ ಆಗಿದ್ದರೆ, ಚೀನಾದ ಜನಸಂಖ್ಯೆ 1,425.7 ಮಿಲಿಯನ್ ಆಗಿದ್ದು, 2.9 ಮಿಲಿಯನ್ ವ್ಯತ್ಯಾಸವಿದೆ.

ಭಾರತದ ಜನಸಂಖ್ಯೆಯಲ್ಲಿ 0-14 ವಯಸ್ಸಿನವರು ಶೇ. 25ರಷ್ಟು, 10-19 ವಯಸ್ಸಿನವರು ಶೇ.18ರಷ್ಟು, 10-24 ವಯಸ್ಸಿನವರು ಶೇ. 26ರಷ್ಟು, 15-64 ವಯಸ್ಸಿನವರು ಶೇ.68ರಷ್ಟು ಮತ್ತು 65 ವಯಸ್ಸಿಗಿಂತ ಮೇಲ್ಪಟ್ಟವರು ಶೇ.7ರಷ್ಟು ಇದ್ದಾರೆ.

ಚೀನಾದ ಜನಸಂಖ್ಯೆಯ ಬೆಳವಣಿಗೆಯ ದರವು 1980ರಿಂದ ಕ್ಷೀಣಿಸುತ್ತಿದೆ. ಚೀನಾದಲ್ಲಿ 0-14 ವಯಸ್ಸಿನವರು ಶೇ.17ರಷ್ಟು, 10-19 ವಯಸ್ಸಿನವರು ಶೇ. 12ರಷ್ಟು, 10-24 ವಯಸ್ಸಿನವರು ಶೇ.69ರಷ್ಟು, 15-64 ವಯಸ್ಸಿನವರು ಶೇ. 69ರಷ್ಟು ಮತ್ತು 65 ವಯಸ್ಸಿಗಿಂತ ಮೇಲ್ಪಟ್ಟವರು ಶೇ.14ರಷ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್