ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ ಎಂದು ಹಿಂದಿ ಪತ್ರಿಕೆಯೊಂದು ವರದಿ ಮಾಡಿತ್ತು.ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವರದಿ ಭಾರಿ ವೈರಲ್ ಆಗಿತ್ತು.ಈ ಬಗ್ಗೆ ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದ್ದು,ಇಂತಹ ಯಾವುದೇ ಸರ್ಜಿಕಲ್ ಸ್ಟ್ರೈಕ್ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಹಿಂದಿ ಪತ್ರಿಕೆಯೊಂದು ವರದಿ ಮಾಡಿ, ಭಾರತ ಮತ್ತೆ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಉಗ್ರರ ಹತ್ಯೆ ಮಾಡಿದೆ.ಭಾರತೀಯ ಸೇನೆ ಪಿಒಕೆಯ ಪೂಂಚ್ ಮತ್ತು ರಾಜೋರಿ ಸೆಕ್ಟರ್ ನಲ್ಲಿ 2.5ಕಿ.ಮೀ ಮುಂದೆ ಸಾಗಿದೆ ಮತ್ತು ಉಗ್ರರ ನೆಲೆಗಳನ್ನು ಹೊಡೆದುರುಳಿಸಿದೆ ಎಂದು ವರದಿ ಮಾಡಿತ್ತು.
ಭಾರತೀಯ ಸೇನೆಯು ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಸುರಕ್ಷಿತವಾಗಿ ಭಾರತದ ನೆಲೆಗೆ ಮರಳಿದೆ ಎಂದು ವರದಿ ತಿಳಿಸಿತ್ತು.
ಈ ವರದಿಯನ್ನು ಸುಳ್ಳು ಎಂದ ಭಾರತೀಯ ಸೇನೆ ಇಂತಹ ಯಾವುದೇ ಸರ್ಜಕಲ್ ಸ್ಟ್ರೈಕ್ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದೆ.
ಬಾಲಾಕೋಟ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ಒಳನುಸುಳಲು ಪ್ರಯತ್ನವನ್ನು ಮಾಡಿದ್ದು, ಭಾರತೀಯ ಸೇನೆ ಅದನ್ನು ವಿಫಲಗೊಳಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಭಾರತೀಯ ಸೇನೆಯ ಕಾರ್ಯಾಚರಣೆಯ ಸಮಯದಲ್ಲಿ, ಭಾರತೀಯ ಸೇನೆಯು AK 47 ರೈಫಲ್, ಎರಡು ಮ್ಯಾಗಜೀನ್ಗಳು, ಗ್ರೆನೇಡ್ಗಳು ಮತ್ತು ಪಾಕ್ ಮೂಲದ ಔಷಧಿಗಳನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ.