ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಯ ಗುಂಡಿಟ್ಟು ಹತ್ಯೆ

ಭಾರತೀಯ ನಿವಾಸಿ ವೈದ್ಯಕೀಯ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿದೆ.

ಆದಿತ್ಯ ಅದ್ಲಾಖಾ(26) ಹತ್ಯೆಯಾದವರು. ಇವರು ಸಿನ್ಸಿನಾಟಿ ವೈದ್ಯಕೀಯ ಶಾಲೆಯ ವಿಶ್ವವಿದ್ಯಾನಿಲಯದಲ್ಲಿ ಆಣ್ವಿಕ ಮತ್ತು ಅಭಿವೃದ್ಧಿ ಜೀವಶಾಸ್ತ್ರ ಕಾರ್ಯಕ್ರಮದಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದರು ಎಂದು ವೈದ್ಯಕೀಯ ಶಾಲೆಯ ಹೇಳಿಕೆ ತಿಳಿಸಿದೆ.

ವಿಯಾಡಕ್ಟ್ ಪಶ್ಚಿಮ ಬೆಟ್ಟ ಶ್ರೇಣಿಯ ಗೋಡೆಗೆ ಅಪ್ಪಳಿಸಿದ ಕಾರಿನ ಒಳಗೆ ನವೆಂಬರ್ 9ರಂದು ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಇದ್ದುದು ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಸಿನ್ ಎಂದು ಸಿನ್ಸಿನಾಟಿ ಪೊಲೀಸ್ ಲೆಫ್ಟಿನೆಂಟ್ ಜೋನಾಥನ್ ಕನ್ನಿಂಗ್ ಹ್ಯಾಮ್ ಹೇಳಿದ್ದಾರೆ.

ಆ ದಾರಿಯಾಗಿ ಹಾದು ಹೋಗುತ್ತಿದ್ದ ಚಾಲಕರು 911ಗೆ ಕರೆ ಮಾಡಿ, ಕಾರಿನಲ್ಲಿ ಗುಂಡು ಹಾಯ್ದ ರಂಧ್ರಗಳಿದ್ದು, ಒಳಗೆ ವ್ಯಕ್ತಿಗೆ ಗುಂಡು ತಗುಲಿದೆ ಎಂಬ ಮಾಹಿತಿ ನೀಡಿದ್ದರು.

ಕೂಡಲೇ ಆದಿತ್ಯ ಅದ್ಲಾಖಾ ಅವರನ್ನು ಯುಸಿ ಮೆಡಿಕಲ್ ಸೆಂಟರ್‌ಗೆ ಸಾಗಿಸಲಾಯಿತು. ಆದ್ರೆ ಅಲ್ಲಿ ಅವರು ಗಂಭೀರ ಸ್ಥಿತಿಯಲ್ಲಿದ್ದರು ಮತ್ತು ಎರಡು ದಿನಗಳ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಗುಂಡಿನ ದಾಳಿ ವರದಿಯಾದಾಗಿನಿಂದ ಯಾರನ್ನೂ ಬಂಧಿಸಲಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಟಾಪ್ ನ್ಯೂಸ್