ಭಾರತದಲ್ಲಿರುವ ಕೆನಡಾ ಪ್ರಯಾಣಿಕರಿಗೆ ಸೂಚನೆ ನೀಡಿದ ಕೆನಡಾ; ಭಾರತ- ಕೆನಡಾ ಸಂಬಂಧದಲ್ಲಿ ಬಿರುಕು

ನವದೆಹಲಿ;ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾದ ಸಂಸತ್ತಿನಲ್ಲಿ ಹೇಳಿದ್ದ ಜಸ್ಟೀನ್‌ ಟ್ರುಡೊ ಸರ್ಕಾರ ಮತ್ತೊಂದು ಕೆನಡಾ ಪ್ರಜೆಗಳಿಗೆ ಮತ್ತೊಂದು ಸಲಹೆ‌ ನೀಡಿದೆ.

ಭಾರತದಲ್ಲಿರುವ ತನ್ನೆಲ್ಲಾ ಪ್ರಜೆಗಳಿಗೆ ಪ್ರಯಾಣ ಸಲಹೆ ಕಳಿಸಿರುವ ಕೆನಡಾ ಸರ್ಕಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಹಾಗೂ ಗುಜರಾತ್‌, ರಾಜಸ್ಥಾನ ಮತ್ತು ಪಂಜಾಬ್‌ನ ಗಡಿ ಭಾಗಕ್ಕೆ ಹೋಗಬೇಡಿ ಎಂದು ಎಚ್ಚರಿಸಿದೆ

ಅನಿರೀಕ್ಷಿತ ಭದ್ರತಾ ಪರಿಸ್ಥಿತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಎಲ್ಲಾ ಪ್ರಯಾಣವನ್ನು ತಪ್ಪಿಸಿ. ಭಯೋತ್ಪಾದನೆ, ಉಗ್ರಗಾಮಿ ಚಟುವಟಿಕೆ, ನಾಗರಿಕ ಅಶಾಂತಿ ಮತ್ತು ಅಪಹರಣದ ಬೆದರಿಕೆ ಇದೆ. ಈ ಸಲಹೆಯು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಅಥವಾ ಅದರೊಳಗೆ ಪ್ರಯಾಣಿಸುವುದನ್ನು ಆದಷ್ಟು ತಡೆಹಿಡಿಯಬೇಕು ಎಂದು ಕೆನಡಾ, ಭಾರತಕ್ಕೆ ತೆರಳುವ ತನ್ನ ಪ್ರಯಾಣಿಕರಿಗೆ ಈ ಸಲಹೆ ನೀಡಿದೆ.

ಅನಿವಾರ್ಯವಿಲ್ಲದಿದ್ದರೆ ಭಾರತಕ್ಕೆ ಪ್ರಯಾಣಿಸಬೇಡಿ ಎಂದು ಕೆನಡಾ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಕುಟುಂಬ ಅಥವಾ ವ್ಯಾಪಾರದ ಉದ್ದೇಶಗಳಿಗೆ ಶೈಕ್ಷಣಿಕ ಉದ್ದೇಶಕ್ಕೆ
ಭಾರತಕ್ಕೆ ಪ್ರಯಾಣಿಸುವ ಬಗ್ಗೆ ನೀವು ಮತ್ತೊಮ್ಮೆ ಯೋಚಿಸಬೇಕು. ನಿಮ್ಮ ಸುರಕ್ಷತೆಗೆ ಮತ್ತು ಭದ್ರತೆಗೆ ಅಪಾಯ ಬರಬಹುದು. ನೀವು ಈಗಾಗಲೇ ಅಲ್ಲಿದ್ದರೆ, ಅಲ್ಲಿರುವ ಅಗತ್ಯತೆಯ ಬಗ್ಗೆ ಯೋಚಿಸಿ ಎಂದು ಕೆನಡಾ ತನ್ನ ಪ್ರಜೆಗಳಿಗೆ ಹೇಳಿದೆ.

ಕೆನಡಾ ಸರ್ಕಾರದ ವೆಬ್ಸೈಟ್ನಲ್ಲಿ ಪ್ರಕಟವಾದ ಸಲಹೆಯು ಭಾರತದಲ್ಲಿ ವಾಸಿಸುವ ಕೆನಡಾದ ಪ್ರಜೆಗಳು ಎಚ್ಚರಿಕೆಯಿಂದಿರುವಂತೆ ಒತ್ತಾಯಿಸಿದೆ.

ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾದ ಸಂಸತ್ತಿನಲ್ಲಿ ಜಸ್ಟೀನ್‌ ಟ್ರುಡೊ ಹೇಳಿದ್ದರು. ಆ ಬಳಿಕ ಕೆನಡಾ ಮತ್ರು ಭಾರತದಲ್ಲಿನ ರಾಯಭಾರಿಗಳ ಉಚ್ಛಾಟಣೆ ನಡೆದಿತ್ತು.

ಟಾಪ್ ನ್ಯೂಸ್