ಸಹೋದರಿಯ ಮದುವೆಯ ಮುನ್ನಾ ದಿನ ಯುವಕ ಆತ್ಮಹತ್ಯೆ
ಇಂದೋರ್:ಸಹೋದರಿಯ ಮದುವೆಗೆ ಮುನ್ನಾ ದಿನ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಚಂದನ್ ನಗರ ಪ್ರದೇಶದಲ್ಲಿ ನಡೆದಿದೆ.
ಮೃತ ಯುವಕನನ್ನು ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿರ್ಪುರ್ ಪ್ರದೇಶದ ನಿವಾಸಿ 22 ವರ್ಷದ ವಿಶಾಲ್ ಚೌಧರಿ ಎಂದು ಗುರುತಿಸಲಾಗಿದೆ.
ವಿಶಾಲ್ ಆತ್ಮಹತ್ಯೆಯಿಂದ ಮದುವೆ ಮನೆಯಲ್ಲಿ ಕುಟುಂಬಸ್ಥರು ಶೋಕದಲ್ಲಿದ್ದಾರೆ.
ಮದುವೆಯ ಮುನ್ನಾ ದಿನ ವಿಶಾಲ್ ಕೋಣೆಯೊಂದರಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಾನೆ. ಇದನ್ನು ನೋಡಿದ ಕುಟುಂಬಸ್ಥರು ತಕ್ಷಣ ಸ್ಪತ್ರೆಗೆ ಕರೆದೊಯ್ದರು ಆದರೆ ಈ ವೇಳೆ ಮೃತಪಟ್ಟಿದ್ದರು.
ಯುವಕನ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಪೊಲೀಸರು ಆತನ ಕುಟುಂಬ ಸದಸ್ಯರ ಹೇಳಿಕೆಯನ್ನು ಪಡೆದಿದ್ದಾರೆ.
ವಿಶಾಲ್ ತನ್ನ ಯಾವುದೇ ಸಮಸ್ಯೆಗಳನ್ನು ಕುಟುಂಬ ಸದಸ್ಯರ ಬಳಿ ಹೇಳಿಕೊಂಡಿಲ್ಲ ಎಂದು ಚಿಕ್ಕಪ್ಪ ಕಮಲ್ ಹೇಳಿದ್ದಾರೆ. ರಾತ್ರಿ ಊಟ ಮುಗಿಸಿ ತನ್ನ ಕೊಠಡಿಯಲ್ಲಿ ಮಲಗಲು ತೆರಳಿದ್ದು, ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.