ಮಂಗಳೂರು;ಕಾಂಗ್ರೆಸ್ ಟಿಕೆಟ್ ಗೆ ನಡೆದ ಭಾರೀ ಪೈಪೋಟಿ ಬಳಿಕ ಇನಾಯತ್ ಅಲಿ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮೊಯ್ದೀನ್ ಬಾವ ಡಿಕೆ ಶಿವಕುಮಾರ್ ವಿರುದ್ಧ ಆರೋಪಿಸಿ ಡಿಕೆ ಶಿವಕುಮಾರ್ ಎರಡು ಕೋಟಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದರು, ಈ ಬಗ್ಗೆ ಪ್ರತಿಕ್ರಿಯಿಸಿದ ಇನಾಯತ್ ಅಲಿ, ಹಣ ಕೊಟ್ಟು ಖರೀಸಿಲು ಸಿನಿಮಾ ಟಿಕೆಟ್ ಅಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸಾವಿರಾರು ಕಾರ್ಯಕರ್ತರ, ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಕೆ ಮಾಡಿದ ಇನಾಯತ್ ಅಲಿ,
ನಾಮಪತ್ರ ಸಲ್ಲಿಕೆ ವೇಳೆ ಮೊಯ್ದೀನ್ ಬಾವಾ ಅವರಿಗೂ ಕರೆದಿದ್ದೆ, ಅವರು ಬಂದಿಲ್ಲ, ಬರುವ ನಿರೀಕ್ಷೆ ಇದೆ.ಜೆಡಿಎಸ್ ಸೇರ್ಪಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಜೊತೆ ಕಾರ್ಯಕರ್ತರಿದ್ದು ಗೆಲುವು ಖಂಡಿತ ಎಂದು ಹೇಳಿದ್ದಾರೆ.
ಬಿಜೆಪಿ ಸರಕಾರದ ಭ್ರಷ್ಟಾಚಾರದಿಂದ ಜನರು ತತ್ತರಿಸಿದ್ದಾರೆ.ನಾನು ಕಾಂಗ್ರೆಸ್ ನ ವಿದ್ಯಾರ್ಥಿ ಸಂಘಟನೆ ಸೇರಿ ಕಳೆದ 25 ವರ್ಷಗಳಿಂದ ರಾಷ್ಟ್ರಮಟ್ಟದಲ್ಲೂ ಕೆಲಸ ಮಾಡಿದ್ದೇನೆ.ಇದರ ಆಧಾರದಲ್ಲಿ ಟಿಕೆಟ್ ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಡಿಕೆಶಿ ಜೊತೆಗಿನ ವ್ಯವಹಾರದ ಪಾಲುದಾರಿಕೆ ಆರೋಪವನ್ನು ತಳ್ಳಿ ಹಾಕಿದ ಇನಾಯತ್ ಇದರ ಬಗ್ಗೆ ದಾಖಲೆ ಇದ್ದರೆ ಕೊಡಲಿ, ನನ್ನ ಮಾಹಿತಿ ಈಗಾಗಲೇ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.