ಬೆಂಗಳೂರು;ಇದ್ರೀಶ್ ಪಾಷಾ ಹತ್ಯೆ ಆರೋಪಿಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಆಹೋರಾತ್ರ ಎಂಬವನ ಜೊತೆ ಪೋನ್ ಸಂವಾದದಲ್ಲಿ ಮಾತನಾಡಿದ್ದನ್ನು ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಸಂಭಾಷಣೆಯ ವೇಳೆ ಇದ್ರೀಶ್ ಪಾಷಾ ಹತ್ಯೆ ಬಗ್ಗೆ ಆಹೋರತ್ರ ಪ್ರಶ್ನೆ ಮಾಡುತ್ತಾರೆ, ಈ ವೇಳೆ ದನ ಕುಯ್ಯೋದು ತಪ್ಪಲ್ವ? ಕರ್ನಾಟಕದಲ್ಲಿ ಯಾವುದೇ ಸರ್ಕಾರ ಬರಲಿ, ದನ ಕಡಿಯುವುದು ಕಂಡರೆ ಅವನನ್ನು ಮೊದಲು ಕಡಿತ್ತೀವಿ. ಒಂದಲ್ಲ 10 ವರ್ಷ ಜೈಲಿಗೆ ಹಾಕಿದರೂ ಗೋವು ಕಡಿಯುವವರನ್ನು ಮತ್ತೆ ಕೊಲ್ತೀವಿ ಎಂದು ಇದ್ರೀಸ್ ಪಾಶ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಗೋಪಿಗೌಡ ಎಂಬುವವನು ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದೆ.
ಹಿಂದುತ್ವ ಎನ್ನುವುದು ನಮ್ಮ ರಕ್ತದಲ್ಲಿ ಬಂದಿದೆ. ದನ ತಿನ್ನಬೇಡಿ, ಮುಸ್ಲಿಮರಿಗೆ ಸಪೋರ್ಟ್ ಮಾಡಬೇಡಿ. ನಮ್ಮಂತವರು ಸತ್ತರೆ ಸಾವಿರ ಜನ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾನೆ.
ಹಿಂದು ಧರ್ಮ ಸಹಬಾಳ್ವೆ ಮಾಡಲು ಹೇಳುತ್ತದೆ, ಇದ್ರೀಶ್ ಪಾಶನನ್ನು ಏಕೆ ಕೊಂದಿರಿ? ನೀವು ಪೊಲೀಸರಿಗೆ ಹಿಡಿದುಕೊಟ್ಟಿದ್ದರೆ ಸಾಕಿರಲಿಲ್ವ? ಕಾನೂನು ಮೀರಿದ್ದು ಏಕೆ ಎಂದು ಅಹೋರಾತ್ರ ಪ್ರಶ್ನಿಸಿದ್ದಕ್ಕೆ, ದನ ಕಡಿಯೋದು ತಪ್ಪಲ್ವ? ದನ ಕಡಿಯುವವರನ್ನು ನಾವು ಕಡಿಯುತ್ತೇವೆ ಎಂದು ಹೇಳುವ ಮೂಲಕ ಇದ್ರೀಸ್ ಪಾಶ ಹತ್ಯೆಯನ್ನು ಸಮರ್ಥಿಸಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ.
ಫೋನ್ ಕರೆಯಲ್ಲಿ ಅಹೋರಾತ್ರ ಮಾತನಾಡಿ, “ಸೂಲಿಬೆಲೆ ನಿಮ್ಮನ್ನು ಹೊರಗೆ ಕರೆಸಿಕೊಂಡು, ನಿಮಗೆ ಊಟ ಹಾಕಿದ್ದು ಏಕೆ? ನಾಗರಕಟ್ಟೆಯ ಅಶ್ವಥ ಮರ ಕಡಿದಿದ್ದಕ್ಕೆ ಅನುಭವಿಸಿದರಿ. ಯಾರನ್ನು ಕೊಂದರು ಅಧರ್ಮ. ಜಗತ್ತಿನ ಯಾವ ಧರ್ಮವೂ ಕೊಲ್ಲು ಎಂದು ಹೇಳಿಕೊಡುವುದಿಲ್ಲ. ನೀವು ಇದ್ರೀಸ್ ಪಾಶನಿಗೆ ಏಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದು ಎಂದು ಪ್ರಶ್ನಿಸಿದ್ದಾರೆ.
ಆರೋಪಿಗಳು ಕೊಲ್ಲಲು ನೀನೆ ಹೇಳಿದ್ದು, ನೀನೆ ಮಾಡಿದ್ದು ಎಂದಿದ್ದಾರೆ. ಯಾರಾದರೂ ಸಾಬರು ನಿನಗೆ ಹೊಡೆಯಲು ಬಂದರೆ ನಮ್ಮನ್ನು ಕರಿ ಬರುತ್ತೇವೆ, ನಿನ್ನನ್ನು ಉಳಿಸುತ್ತೇವೆ ಎಂದಿದ್ದಾರೆ.
ನೀನು ನನಗೆ ಜಾಮೀನು ಕೊಡಿಸುತ್ತೀಯಾ? ಸಪೋರ್ಟ್ ಮಾಡ್ತೀಯ ಎಂದು ನಂಬಿದ್ದೇವು. ಆದರೆ ನೀನು ಮುಂಬೈಗೆ ಕರೆದು ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿಕೊಂಡೆ ಎಂದು ಅಹೋರಾತ್ರ ವಿರುದ್ಧ ಆರೋಪಿಸಿದ್ದಾರೆ.
ಆನಂತರ ಆಹೋರಾತ್ರ ಸಾತನೂರು ಪೊಲೀಸ್ ಠಾಣೆಗೆ ಫೋನ್ ಮಾಡಿ ಪುನೀತ್ ಕೆರೆಹಳ್ಳಿ ಜೊತೆಗಿದ್ದ ಆರೋಪಿಗಳು ಫೋನ್ ಮಾಡಿ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.