ಐಸ್ ಕ್ರೀಂ ತಿಂದ ಬಳಿಕ ವಾಂತಿ-ಭೇದಿಯಿಂದ ಬಳಲಿದ್ದ ಬಾಲಕ!
ಕೋಝಿಕೋಡು:ಐಸ್ ಕ್ರೀಂ ತಿಂದ ಬಳಿಕ ವಾಂತಿ-ಭೇದಿಯಿಂದ ಬಳಲಿದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.
ಅರಿಕ್ಕುಲಂನಿವಾಸಿ ಮೊಹಮ್ಮದ್ ಅಲಿ ಅವರ ಪುತ್ರ ಹಸನ್ ರಿಫಾಯಿ(12)ಮೃತ ಬಾಲಕ.ರಿಫಾಯಿ 6ನೇ ತರಗತಿಯ ಬಾಲಕನಾಗಿದ್ದು ಆದಿತ್ಯವಾರ ಸಂಜೆ ಐಸ್ ಕ್ರೀಂ ತಿಂದಿದ್ದಾನೆ.ಬಳಿಕ ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ವಾಂತಿ ಭೇದಿ ಹಿನ್ನೆಲೆ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ವೈದ್ಯರ ಸಲಹೆಯ ಮೇರೆಗೆ ಕೋಝಿಕ್ಕೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಸೋಮವಾರ ರಿಫಾಯಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ತೆರಳಿ ಪರಿಶೀಲಿಸಿದ್ದಾರೆ.ಬಾಲಕ ಐಸ್ ಕ್ರೀಂ ಖರೀದಿಸಿದ ಅಂಗಡಿಯನ್ನು ಪೊಲೀಸರು ಸೀಲ್ ಮಾಡಿದ್ದಾರೆ.
ಬಾಲಕನ ಸಾವಿಗೆ ಐಸ್ ಕ್ರೀಂ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಅದೇ ಕಾರಣ ಎಂದು ಈಗ ಹೇಳಲು ಸಾಧ್ಯವಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಮಾಹಿತಿ ಬಹಿರಂಗವಾಗಲಿದೆ.