ಉತ್ತರ ಪ್ರದೇಶ;ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ 2023ನೇ ಸಾಲಿನ ಫಲಿತಾಂಶದಲ್ಲಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕಸ್ವಾ ಕುರವ್ಲಿ ಎಂಬ
ಪ್ರದೇಶದ ಎರಡೂ ಕಾಲುಗಳು ಮತ್ತು ಒಂದು ಕೈ ಕಳೆದುಕೊಂಡಿರುವ ಯುವಕ ಅಮೋಘ ಸಾಧನೆ ಮಾಡಿದ್ದಾರೆ.
ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕಸ್ವಾ ಕುರವ್ಲಿ
ನಿವಾಸಿ ಸೂರಜ್ ತಿವಾರಿ ಎಂಬವರು 2017 ರಲ್ಲಿ ಸಂಭವಿಸಿದ ಅಪಘಾತದಲ್ಲಿ ತಮ್ಮ ಎರಡೂ ಕಾಲುಗಳು ಮತ್ತು ಒಂದು ಕೈ ಕಳೆದುಕೊಂಡಿದ್ದರು.ಆದರೂ ಛಲಬಿಡದೆ ಸತತ ಪರಿಶ್ರಮ ಹಾಕಿ ಐಎಎಸ್ ಪರೀಕ್ಷೆ ಎದುರಿಸಿದ್ದರು. ಇದೀಗ ಫಲಿತಾಂಶದಲ್ಲಿ 917ನೇ ಸ್ಥಾನ ಪಡೆದುಕೊಂಡು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.
2017ರಲ್ಲಿ ದೆಹಲಿಯ ತನ್ನ ಕಾಲೇಜಿನಿಂದ ಸೂರಜ್ ಹಿಂದಿರುಗುತ್ತಿದ್ದಾಗ ರೈಲು ಅಪಘಾತಕ್ಕೊಳಗಾಗಿದ್ದರು.ಈ ವೇಳೆ ತಮ್ಮ ಎರಡೂ ಕಾಲುಗಳು ಮತ್ತು ಬಲಗೈ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು.ಇದಾದ ನಂತರ ಕೆಲವು ತಿಂಗಳುಗಳ ಕಾಲ ಕುಟುಂಬದ ಸದಸ್ಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದರು ಎನ್ನಲಾಗಿದೆ.
ಸೂರಜ್ ಅಪಘಾತದಲ್ಲಿ ಭೀಕರ ನಡೆದಾಡುವ ಮತ್ತು ಬರೆಯುವ ಸಾಮರ್ಥ್ಯವನ್ನೇ ಕಸಿದುಕೊಂಡಿದ್ದರು. ಆದರೂ ಪರಿಶ್ರಮದಿಂದ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಈಗ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರಷ್ಯನ್ ಭಾಷೆಯಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ.
ಕೋವಿಡ್ -19 ವೈರಸ್ ಉಲ್ಬಣಗೊಂಡಾಗ ಸೂರಜ್ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ತಮ್ಮ ಮೊದಲ ಪ್ರಯತ್ನದಲ್ಲಿಯೇ ಪ್ರಿಲಿಮ್ಸ್ ಮತ್ತು ಮೇನ್ಸ್‌ನಲ್ಲಿ ಉತ್ತೀರ್ಣರಾದರು. ಆದರೆ, ಸಂದರ್ಶನದಲ್ಲಿ ಕೆಲವು ಅಂಕಗಳಿಂದ ಹಿನ್ನಡೆಯಾಯಿತು. ಇದೀಗ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಮಗನ ಸಾದನೆ ಬಗ್ಗೆ ಮಾತನಾಡಿದ ಸೂರಜ್ ತಂದೆ ರಮೇಶ್ ಕುಮಾರ್,ಇಂದು ನಾವು ತುಂಬಾ ಸಂತೋಷವಾಗಿದ್ದೇವೆ. ನನ್ನ ಮಗ ತುಂಬಾ ಧೈರ್ಯಶಾಲಿ. ಆತ ಎಂದಿಗೂ ಛಲ ಬಿಡಲಿಲ್ಲ.ಜೀವನದಲ್ಲಿ ಯಶಸ್ವಿಯಾಗಲು ನ್ಯೂನ್ಯತೆ ಅಡ್ಡಿಯಲ್ಲ ಎಂದು ತೋರಿಸಿಕೊಟ್ಟಿದ್ದಾನೆ ಎಂದು ಹೇಳಿದ್ದಾರೆ.