40 ಲಕ್ಷ ವೇತನ ಪಡೆಯುವ IAS ಅಧಿಕಾರಿಗೆ ದಿನದಲ್ಲಿ 8 ನಿಮಿಷ ಕೆಲಸ!;ವರ್ಗಾವಣೆ ಮಾಡುವಂತೆ ಸರಕಾರಕ್ಕೆ ಪತ್ರ ಬರೆದ ಹಿರಿಯ ಐಎಎಸ್ ಅಧಿಕಾರಿ

ಹರ್ಯಾಣ;ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು ಹರ್ಯಾಣದಲ್ಲಿ ರಾಜ್ಯ ವಿಜಿಲೆನ್ಸ್ ವಿಭಾಗದ ಮುಖ್ಯಸ್ಥರಾಗಿ ಪೋಸ್ಟಿಂಗ್ ಕೋರಿದ್ದಾರೆ.

ಖೇಮ್ಕಾ ಅವರು ಜನವರಿ 23 ರಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಪೋಸ್ಟಿಂಗ್ ಕೋರಿ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಖೇಮ್ಕಾ ಅವರನ್ನು ಪತ್ರಾಗಾರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ಜನವರಿ 9, 2023 ರಂದು ವರ್ಗಾಯಿಸಲಾಗಿತ್ತು.

ಪತ್ರಾಗಾರ ಇಲಾಖೆಯಲ್ಲಿ ದಿನಕ್ಕೆ ಕೇವಲ 8 ನಿಮಿಷಗಳ ಕಾಲ ಕೆಲಸ ಮಾಡುತ್ತಿದ್ದೇನೆ.ನನ್ನ ವಾರ್ಷಿಕ ವೇತನ 40 ಲಕ್ಷ ರೂಪಾಯಿ ಇದೆ.ಹಾಗಾಗಿ, ರಾಜ್ಯ ಜಾಗೃತ ಇಲಾಖೆಗೆ ಪೋಸ್ಟಿಂಗ್​ ಮಾಡುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.

ಸುಪ್ರೀಂ ಕೋರ್ಟ್‌ನ 1987 ರ ತೀರ್ಪು ಉಲ್ಲೇಖಿಸಿದ ಖೇಮ್ಕಾ,ಸಾರ್ವಜನಿಕ ಅಧಿಕಾರಿಗೆ ಪೋಸ್ಟಿಂಗ್ ನೀಡಬೇಕು. ಅವರು ಸ್ಥಾನಮಾನಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಟಾಪ್ ನ್ಯೂಸ್