10ನೇ ತರಗತಿಯಲ್ಲಿ ಇಂಗ್ಲೀಷ್‌ನಲ್ಲಿ 35, ಗಣಿತದಲ್ಲಿ 36 ಅಂಕ ಪಡೆದ ಬಾಲಕ ಈಗ ಜಿಲ್ಲಾಧಿಕಾರಿ!

10ನೇ ತರಗತಿಯಲ್ಲಿ ಜಸ್ಟ್ ಪಾಸ್ ಆಗಿದ್ದ ಬಾಲಕನೋರ್ವ ಇವತ್ತು ಬೆಳೆದು ಐಎಎಸ್‌ ಅಧಿಕಾರಿ ಆಗಿದ್ದು, ಭಾರೀ ನೆಟ್ಟಿನಲ್ಲಿ ಹವಾ ಸೃಷ್ಟಿಸಿದ್ದಾರೆ.

ಹೌದು, ತುಷಾರ್ ಸುಮೇರಾ, ಐಎಎಸ್ ಅಧಿಕಾರಿಯಾದ ಇವರು ಗುಜರಾತ್‌ನ ಭರೂಚ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು 10ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ 100 ಕ್ಕೆ 35 ಅಂಕಗಳನ್ನು, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಅಂಕಗಳನ್ನು ಗಳಿಸಿದ್ದರು. ಇವರ ಅಂಕಪಟ್ಟಿಯನ್ನು ಮತ್ತೋರ್ವ ಐಎಎಸ್‌ ಅಧಿಕಾರಿ ಅವನೀಶ್ ಶರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾಧನೆಗೆ ಅಂಕಪಟ್ಟಿ ಮುಖ್ಯವಲ್ಲ ಎಂದು ಹೇಳಿಕೊಂಡಿದ್ದಾರೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತೆಂದು ಎಲ್ಲಾ ಮುಗಿದೇ ಹೋಯಿತು ಎಂದುಕೊಳ್ಳಬೇಡಿ ಎಂದು ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.

ಟಾಪ್ ನ್ಯೂಸ್