ಐಎಎಸ್ ಅಧಿಕಾರಿ ಮೇಲೆ ಶಾಯಿ ಎರಚಿದ ವ್ಯಕ್ತಿ

ಐಎಎಸ್ ಅಧಿಕಾರಿ ಮೇಲೆ ಶಾಯಿ ಎರಚಿದ ವ್ಯಕ್ತಿ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿ ವಿ.ಕೆ. ಪಾಂಡಿಯನ್ ಮತ್ತು ಪುರಿ ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ಮೇಲೆ ಶಾಯಿ ಎರಚಿರುವ ಬಗ್ಗೆ ವರದಿಯಾಗಿದೆ.

ಪುರಿ ಜಿಲ್ಲೆಯ ಸತ್ಯಬಾದಿ ಪ್ರದೇಶದ ಉತ್ಕಲಮಣಿ ಗೋಪಬಂಧು ಸ್ಮೃತಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಎಎಸ್ ಅಧಿಕಾರಿ ಪಾಂಡಿಯನ್ ಭಾಗಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಐಎಎಸ್ ಅಧಿಕಾರಿಗಳ ಮೇಲೆ ಮಸಿ ಎರಚಿದ ವ್ಯಕ್ತಿಯನ್ನು ಜಿಲ್ಲೆಯ ಸತ್ಯಬಾಡಿ ವಿಧಾನಸಭಾ ಕ್ಷೇತ್ರದ ಕನಾಸ್ ಬ್ಲಾಕ್ ವ್ಯಾಪ್ತಿಯ ಹರಿಪುರ ಗ್ರಾಮದ ನಿವಾಸಿ ಭಾಸ್ಕರ್ ಸಾಹೂ ಎಂದು ಗುರುತಿಸಲಾಗಿದೆ.

ಪೊಲೀಸರು ಸಾಹೂ ಅವರನ್ನು ಬಂಧಿಸಿದ್ದಾರೆ. ಶಾಯಿ ದಾಳಿಯಾದ ಬಳಿಕ ಪಾಂಡಿಯನ್ ಶಾಯಿ ಬಳಿದ ಬಿಳಿ ಅಂಗಿಯನ್ನು ಧರಿಸಿ ಜನರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಸ್ವೀಕರಿಸಿದ್ದಾರೆ.

ರಾಜಕೀಯ ಉದ್ದೇಶದಿಂದ ಪಾಂಡಿಯನ್ ಅವರನ್ನು ಗುರಿಯಾಗಿಸಿಕೊಂಡು ಮಸಿ ಎರಚಲಾಗಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಟಾಪ್ ನ್ಯೂಸ್