ಮಗನ ಸಾವನ್ನು ನೋಡಲು ಸಾಧ್ಯವಿಲ್ಲ ಎಂದು ತಾಯಿ ಆತ್ಮಹತ್ಯೆ; ಹೃದಯವಿದ್ರಾಹಕ ಘಟನೆ

ಹೈದರಾಬಾದ್;ಮಗನ ಸಾವನ್ನು ನೋಡಲು ಸಾಧ್ಯವಿಲ್ಲ ಎಂದು ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಹಕ ಘಟನೆ ನಡೆದಿದೆ.

ಹೈದರಾಬಾದ್​ನ ಕೆಪಿಎಚ್​ಬಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ
ಸ್ವಾತಿ(38)ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್​ವೇರ್​ ಇಂಜಿನಿಯರ್​.

ಸ್ವಾತಿ ಮತ್ತು ಶ್ರೀಧರ್‌ ದಂಪತಿಗೆ​ 8 ವರ್ಷದ ಓರ್ವ ಮಗನಿದ್ದಾನೆ.ಮಗ ಅಂಗವೈಕಲ್ಯದಿಂದ ಬಳಲುತ್ತಿದ್ದ.ಇದು ಆಕೆಯ ಪತಿಗೆ ಸಮಸ್ಯೆಯಾಗಿತ್ತು.

ಮಗನಿಗೆ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವಂತೆ ಸ್ವಾತಿಯನ್ನು ಶ್ರೀಧರ್​ ಒತ್ತಾಯಿಸುತ್ತಿದ್ದ. ಆದರೆ,ಸ್ವಾತಿ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆದ್ದರಿಂದ ಆಕೆಗೆ ಪತಿ ಶ್ರೀದರ್ ಕಿರುಕುಳ ಕೊಡುತ್ತಿದ್ದ.

ಇದರಿಂದಾಗಿ ಮಗನಿಗೆ ಇವರು ಮುಂದೆ ಕೊಲೆ ಮಾಡುತ್ತಾರೆಂದು ಸ್ವಾತಿ 23ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಟಾಪ್ ನ್ಯೂಸ್