ಬೀದಿ ನಾಯಿಯ ದಾಳಿ ನಡೆಸಿ 4 ವರ್ಷದ ಮಗುವನ್ನು ಕೊಂದು ಹಾಕಿರುವ ಭಯಾನಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗುವಿನ ತಂದೆ ಗಂಗಾಧರ್ ಅವರು ಅಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ರಸ್ತೆಯಲ್ಲಿದ್ದ ಮಗುವಿನ ಮೇಲೆ ಮೂರು ನಾಯಿಗಳು ದಾಳಿ ನಡೆಸಿದೆ.
ನಾಯಿ ದಾಳಿಯಿಂದ ಅಳುತ್ತಿದ್ದ ಮಗುವಿನ ಕೂಗು ಕೇಳಿದ ತಂದೆ ಓಡಿ ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ ಎನ್ನಲಾಗಿದೆ.