ಮನೆಗೆ‌ ನುಗ್ಗಿ ಅಮಾಯಕರ ಮೇಲೆ ದಬ್ಬಾಳಿಕೆ ಮಾಡಿ ಎಳೆದೊಯ್ದ ಪೊಲೀಸರು; ಹೈದ್ರಾಬಾದ್ ಪ್ರತಿಭಟನೆ ವೇಳೆ ಏನೆಲ್ಲಾ ಕರಾಳ ಘಟನೆ ನಡೆದಿದೆ? ಸ್ಥಳೀಯರು ಏನೆಲ್ಲಾ ಹೇಳಿದ್ರು?

ಹೈದರಾಬಾದ್‌;ಪ್ರವಾದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿ ಶಾಸಕ ವಿಡಿಯೋ ರಿಲೀಸ್ ಬೆನ್ನಲ್ಲೇ ಹೈದ್ರಾಬಾದ್ ನಲ್ಲಿ ಭಾರೀ ಪ್ರತಿಭಟನೆ ಭುಗಿಲೆದ್ದಿತ್ತು.ರಾಜಾ ಸಿಂಗ್ ಬಂಧಿಸಿ ಬಿಡುಗಡೆ ಬೆನ್ನಲ್ಲೇ ಮತ್ತೆ ಭುಗಿಲೆದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು.ಪೊಲೀಸರು ಲಾಠೀ ಚಾರ್ಜ್ ಮಾಡಿದ್ದರು.
ಓಲ್ಡ್ ಸಿಟಿಯ ಮುಸ್ಲಿಂ ಪ್ರಾಬಲ್ಯದ ಷಾ ಅಲಿ ಬಂದಾ ಪ್ರದೇಶದಲ್ಲಿ ಈ ವೇಳೆ ಭಾರೀ ಪೊಲೀಸ್ ದಬ್ಬಾಳಿಕೆ ನಡೆದ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲಾಗಿದೆ. ಅಲ್ಪಸಂಖ್ಯಾತ ಸಮುದಾಯದ‌ ಮೇಲೆ ದಬ್ಬಾಳಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಬುಧವಾರ ಸಂಜೆ ಷಾ ಅಲಿ ಬಂದಾದಲ್ಲಿನ ಜೊಹ್ರಾ ಕಾಲೋನಿಯಲ್ಲಿ ಲಾಠಿ ಚಾರ್ಜ್‌ನಲ್ಲಿ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆಂದು ಸ್ಥಳೀಯರು ಹೇಳಿದ್ದಾರೆ.
ಈ ಬಗ್ಗೆ ಹುಸೇನ್ ಎಂಬಾತ ಮಾತನಾಡಿ, ನೀರು ಸರಬರಾಜು ಅಂಗಡಿಯಲ್ಲಿ ಕೆಲಸ ಮಾಡತ್ತಿದೆ. ಸಾಮಾನ್ಯವಾಗಿ ನಾವು ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡುತ್ತೇವೆ, ಆದರೆ ನಿರ್ಬಂಧಗಳಿಂದಾಗಿ ನಾವು ರಾತ್ರಿ 10 ರ ಸುಮಾರಿಗೆ ಮುಚ್ಚಿದ್ದೇವೆ.ನಮಗೆ ಅಂಗಡಿಯ ಹೊರಗೆ ಗದ್ದಲ ಕೇಳಿದೆ.ನನ್ನ ಬಾಸ್ ತಕ್ಷಣವೇ ಗೇಟ್ ಅನ್ನು ಲಾಕ್ ಮಾಡಲು ನನ್ನನ್ನು ಕೇಳಿದರು.ಆಗ ಲಾಠಿ ಹಿಡಿದಿದ್ದ ಒಬ್ಬ ಪೋಲೀಸನು ನನ್ನನ್ನು ಗಮನಿಸಿ ಒಳಗೆ ನುಗ್ಗಲು ಪ್ರಯತ್ನಿಸಿದನು.ನಾನು ಅಂಗಡಿಯೊಳಗೆ ಓಡಿಹೋದರೂ, ಪೊಲೀಸರು ಬಲವಂತವಾಗಿ ಒಳಗೆ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿದರು.ಅವರು ನನ್ನನ್ನು ತಮ್ಮ ವಾಹನದಲ್ಲಿ ಹಾಕಿದ್ದಾರೆ. ಅವರು ನೆಲದ ಮೇಲೆ ಬಿದ್ದ ನನ್ನ ಫೋನ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಪೊಲೀಸರು ಗೇಟ್‌ಗಳನ್ನು ಒದೆಯಲು ಪ್ರಾರಂಭಿಸಿದರು, ಅದು ಬೇಗನೆ ಒಡೆದಿದೆ.ಹುಸೇನ್ ಓಡಲು ಶುರುಮಾಡಿದಾಗ ನನೂ ಹೆದರಿ ಅಂಗಡಿಯಲ್ಲಿ ಅಡಗಿ ಕುಳಿತೆ.ಪೊಲೀಸರು ಹುಸೇನ್ ಅವರನ್ನು ಥಳಿಸುತ್ತಿದ್ದ ರೀತಿ ಭಯ ಹುಟ್ಟಿಸುವಂತಿತ್ತು.ನಾನು ಹೊರಗೆ ಬರಲು ನಿಜವಾಗಿಯೂ ಹೆದರುತ್ತಿದ್ದೆ ಎಂದು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಜಾಹಿದ್ ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ರಾಜಾ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಬುಧವಾರ ರಾತ್ರಿ 9.30ಕ್ಕೆ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾ ರ‍್ಯಾಲಿ ವೇಳೆ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಬಳಿಕ ಲಾಠಿ ಚಾರ್ಜ್ ಮಾಡಿದ್ದಾರೆ.ಪೋಲೀಸರು ಅತಿರೇಕಕ್ಕೆ ಹೋದರು ಮತ್ತು ಕನಿಷ್ಠ 80 ಜನರನ್ನು ಬಂಧಿಸಿದರು.

ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಮಧ್ಯಸ್ಥಿಕೆಯ ನಂತರ ಬಂಧಿತರನ್ನು ಕಂಚನ್‌ಬಾಗ್ ಪೊಲೀಸ್ ಠಾಣೆಯಿಂದ ನಂತರ ಬಿಡುಗಡೆ ಮಾಡಲಾಗಿದೆ.
ಇನ್ನು ವೈರಲ್ ವೀಡಿಯೊದಲ್ಲಿ, ಕನಿಷ್ಠ ಆರು ಪೊಲೀಸರು ಮನೆಯ ಬಾಗಿಲು ಮುರಿದು,ಪುರುಷರನ್ನು ಹಿಡಿದು ಅವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು,ಅವರ ಪೋಷಕರು ಪೊಲೀಸರನ್ನು ಬಿಟ್ಟುಬಿಡುವಂತೆ ಬೇಡಿಕೊಂಡರು.

ಈ ಬಗ್ಗೆ 20 ವರ್ಷದ ಅಹ್ತೇಶಮ್ ಅಹ್ಮದ್ ಮಾದ್ಯಮದ ಜೊತೆ ಮಾತನಾಡಿ,ನಾವು ಊಟ ಮಾಡುತ್ತಿದ್ದೆವು. ಒಳಗಿನಿಂದ ಬಾಗಿಲು ಹಾಕಲಾಗಿತ್ತು.ಆದರೆ ಪೊಲೀಸರು ಅದನ್ನು ನಿರಂತರವಾಗಿ ಒದೆಯಲು ಪ್ರಾರಂಭಿಸಿದರು ಮತ್ತು ಅದನ್ನು ತೆರೆಯುವಂತೆ ಬೆದರಿಕೆ ಹಾಕಿದರು.ಬಳಿಕ ನನ್ನ ತಂದೆ ಬಾಗಿಲು ತೆರೆದರು.ಆಗ ಕನಿಷ್ಠ ಆರು ಪೊಲೀಸರು ಮನೆಗೆ ನುಗ್ಗಿ ನಮ್ಮನ್ನು ಹಿಡಿದರು,ಗಲಿಬಿಲಿಯಲ್ಲಿ ನನ್ನ ಸಹೋದರನ ಅಂಗಿ ಹರಿದಿದೆ.ಅವರು ನಮ್ಮನ್ನು ಬಲವಂತವಾಗಿ ತಮ್ಮ ವಾಹನದಲ್ಲಿ ಹಾಕಿಕೊಂಡರು.ನಮ್ಮೆಲ್ಲರನ್ನು ಹೊಡೆಯಲಾಯಿತು.ಕಲ್ಲು ತೂರಾಟಕ್ಕೂ ನಮಗೂ ಯಾವುದೇ ಸಂಬಂಧವಿಲ್ಲದಿದ್ದರೂ,ಅವರು ನಮ್ಮನ್ನು ಅವಾಚ್ಯವಾಗಿ ನಿಂದಿಸಿದರು,ನಮ್ಮ ಮೇಲೆ ಕಲ್ಲು ಎಸೆಯಲು ನಿಮಗೆ ಎಷ್ಟು ಧೈರ್ಯವಿದೆ ಎಂದು ಕೇಳಿದರು. ನಗರದಲ್ಲಿ ಶಾಂತಿ ನೆಲೆಸಬೇಕೆಂದು ಅವರು ಬಯಸಿದ್ದರು ಎಂದು ಹೇಳಿದರು.
ಹೈದರಾಬಾದ್‌ನಲ್ಲಿ ಇಲ್ಲಿಯವರೆಗೆ ಯಾವುದೇ ಕೋಮುಗಲಭೆ ನಡೆದಿರುವುದನ್ನು ನಾನು ನೋಡಿಲ್ಲ, ಇದೇ ಮೊದಲ ಬಾರಿಗೆ ಶಾಂತಿಗೆ ಧಕ್ಕೆ ಉಂಟಾಗಿದೆ.ಶಾಂತಿ ನೆಲೆಸಬೇಕೆಂದು ನಾವು ಬಯಸುತ್ತೇವೆ.ರಾಜಾ ಸಿಂಗ್ ಮಾಡಿದ್ದು ಸ್ವೀಕಾರಾರ್ಹವಲ್ಲ. ಅವರು ಶಿಕ್ಷೆಗೆ ಅರ್ಹರು.ಶಿಕ್ಷೆ ವಿಧಿಸದಿದ್ದರೆ, ಅದು ದ್ವೇಷದ ಭಾಷಣದ ಸಾಮಾನ್ಯೀಕರಣಕ್ಕೆ ಕಾರಣವಾಗುತ್ತದೆ. ಈಗಲೇ ನೂಪುರ್ ಶರ್ಮಾ ಯಾವುದೇ ಶಿಕ್ಷೆಯಿಲ್ಲದೆ ಪಾರಾಗಿದ್ದಾರೆ. ಸಿಂಗ್ ಕೂಡ ಯಾವುದೇ ಪರಿಣಾಮ ಎದುರಿಸಲಾರರು ಎಂಬುದು ನಮ್ಮ ಆತಂಕ.ಅವನಿಗೆ ಶಿಕ್ಷೆಯಾಗಲಿ ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ಹೈದರಾಬಾದ್ ಸಹಜ ಸ್ಥಿತಿಗೆ ಮರಳಲಿ ಎಂದು 33 ವರ್ಷದ ನಿಜಾಮ್ ಖಾನ್ ಹೇಳಿದರು.


ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು