ಅಂಧ ವೃದ್ಧನಿಗೆ ಜೈಶ್ರೀರಾಮ್ ಘೋಷಣೆ ಕೂಗುವಂತೆ ಆಗ್ರಹಿಸಿ ಹಲ್ಲೆ

ಕೊಪ್ಪಳ: ಅಂಧ ವೃದ್ಧರೊಬ್ಬರಿಗೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತಪಡಿಸಿ ದುಷ್ಕರ್ಮಿಗಳ ತಂಡ ಹಲ್ಲೆಗೈದಿರುವ ಘಟನೆ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

ಈ ಬಗ್ಗೆ ಮೆಹಬೂಬ್ ನಗರದ ಹುಸೇನ್ ಸಾಬ್ ಎಂಬವರು ನೀಡಿರುವ ದೂರಿನಂತೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಸೇನ್ ಸಾಬ್ ಕೆಲಸದ ನಿಮಿತ್ತ ಹೊಸಪೇಟೆಗೆ ಹೋದವರು ನ.25ರಂದು ಮಧ್ಯರಾತ್ರಿ ವೇಳೆ ಗಂಗಾವತಿಗೆ ವಾಪಸ್ ಆಗಿದ್ದರು.ಅಲ್ಲಿಂದ ಮನೆಗೆ ತೆರಳಲು ಆಟೊ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಬೈಕಿನಲ್ಲಿ ಬಂದ ಕೆಲವು ಯುವಕರು ಎಲ್ಲಿಗೆ ಹೋಗುತ್ತಿದ್ದಿಯಾ? ಎಂದು ಪ್ರಶ್ನಿಸಿ ಬಲವಂತವಾಗಿ ತನ್ನನ್ನು ಬೈಕ್ ಮೇಲೆ ಕೂರಿಸಿಕೊಂಡು ಪಂಪಾ ನಗರ ಬಳಿ ಕರೆದುಕೊಂಡು
ಹೋದರು.

ಬಳಿಕ ನನಗೆ ಬೆದರಿಕೆ ಹಾಕಿ ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದೊಯ್ದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬಲವಂತ ಮಾಡಿ ಹಲ್ಲೆ ಮಾಡಿದ್ದಾರೆ
ನನಗೆ ಕಣ್ಣು ಕೂಡ ಕಾಣುವುದಿಲ್ಲ. ನನ್ನ ಬಳಿಯಿದ್ದ ಹಣವನ್ನು ದುಷ್ಕರ್ಮಿಗಳ ತಂಡ ದೋಚಿಕೊಂಡು ಹೋಗಿದೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

ಟಾಪ್ ನ್ಯೂಸ್