ಬೆಂಗಳೂರು:ಟೊಮೆಟೊ ದರ ಗಗನಕ್ಕೇರಿರುವ ಬೆನ್ನಲ್ಲೇ
ಜನರು ಪದಾರ್ಥಗಳಿಗೆ ಹುಣಸೆ ಬಳಕೆ ಮುಂದಾಗಿದ್ದಾರೆ.ಇದರಿಂದಾಗಿ ಹುಣಸೆಗೆ ಬೇಡಿಕೆ ಹೆಚ್ಚಾಗಿದ್ದು, ಹುಣಸೆ ಹುಳಿ ಬೆಲೆಯು ಏರಿಕೆಯಾಗುತ್ತಿದೆ.
ನೂರರ ಗಡಿಯಲ್ಲಿದ್ದ ಹುಣಸೆ ಬೆಲೆ ಇದೀಗ 200ರೂ. ಗಡಿ ತಲುಪಿದೆ.
ಕೆಜಿಗೆ 90ರೂ. ಇದ್ದ ಹುಣಸೆ ಬೆಲೆ ಈಗ 140ರಿಂದ 150 ರೂ.ಗೆ ಮಾರಾಟವಾಗುವ ಮೂಲಕ 50 ರೂ. ಹೆಚ್ಚಳವಾಗಿದೆ. ಇನ್ನು ಅತುಅತ್ತಮ ಗುಣಮಟ್ಟದ ಹುಣಸೆ ದರ 200ರಿಂದ 220ರೂ ತಲುಪಿದೆ