ಪುರಸಭೆಯಲ್ಲಿ ಕುರಾನ್ ಪಠಿಸಿದ್ದಾರೆಂದು ಸಾಭಾಂಗಣಕ್ಕೆ ಗೋಪೂಜೆ ಮಾಡಿ, ಗೋ ಮೂತ್ರ ಸಿಂಪಡಿಸಿದ ಬಿಜೆಪಿ ಸದಸ್ಯರು

ಪುರಸಭೆಯಲ್ಲಿ ಕುರಾನ್ ಪಠಿಸಿದ್ದಾರೆಂದು ಸಾಭಾಂಗಣಕ್ಕೆ ಗೋಪೂಜೆ ಮಾಡಿ,ಗೋ ಮೂತ್ರ ಸಿಂಪಡಿಸಿದ ಬಿಜೆಪಿ ಸದಸ್ಯರು
ಬಾಗಲಕೋಟೆ;ಪುರಸಭೆ ಅಧ್ಯಕ್ಷರ‌ ಅಧಿಕಾರ‌ ಸ್ವೀಕಾರ ಸಂದರ್ಭದಲ್ಲಿ ಕುರಾನ್ ಪಠಿಸಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಪುರಸಭೆಯ ಸಭಾಂಗಣದಲ್ಲಿ ಗೋಮೂತ್ರ ಸಿಂಪಡಿಸಿ,ಗೋಪೂಜೆ ಮಾಡಿದ್ದಾರೆ.

ಹುನಗುಂದ ಪಟ್ಟಣದ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅಧ್ಯಕ್ಷ ಪರ್ವೇಜ್ ಖಾಜಿ ಅವರ ಪದಗ್ರಹಣ ಸಂದರ್ಭದಲ್ಲಿ ದುಆ ಮಾಡಿ ಎಲ್ಲರ ಒಳಿತಿಗೆ ಪ್ರಾರ್ಥನೆ ಮಾಡಲಾಗಿತ್ತು.
ಇಂದು‌‌ ಪುರಸಭೆಯ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆದರೆ ಬಿಜೆಪಿ ಸದಸ್ಯರು ಸಾಮಾನ್ಯ ಸಭೆಗೆ ಹಾಜರಾಗದೆ, ಕೇಸರಿ ಶಾಲಿನೊಂದಿಗೆ ಸಭಾಂಗಣದಲ್ಲಿ ಗೋಪೂಜೆ ಮಾಡಿದ್ದಾರೆ.ಗೋ ಮೂತ್ರ ಸಿಂಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪುರಸಭೆ ಅಧ್ಯಕ್ಷರು, ಗೋ ಪೂಜೆಗೆ ನಮ್ಮಿಂದ ಯಾವುದೇ ಆಕ್ಷೇಪ ಇಲ್ಲ.ಆದರೆ,
ಈ ಘಟನೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಹೇಳಿದರು.ಟಾಪ್ ನ್ಯೂಸ್