ಚಿಕ್ಕಮಗಳೂರು; ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಇಬ್ಬರ ಬಂಧನ

ಚಿಕ್ಕಮಗಳೂರು;ಹುಲಿ ಉಗುರು ಪೆಂಡೆಂಟ್ ಗಳನ್ನು ಧರಿಸಿದ್ದ ಇಬ್ಬರನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ನಿಷೇಧಿತ ವಸ್ತುವಾದ ಹುಲಿ ಉಗುರು ಪೆಂಡೆಂಟ್ ಧರಿಸಿದ್ದಕ್ಕಾಗಿ ಸತೀಶ್ ಮತ್ತು ರಂಜಿತ್ ಎಂಬುವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಗಳಿಂದ ಪೆಂಡೆಂಟ್ ನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸತೀಶ್ ಮತ್ತು ರಂಜಿತ್ ಇಬ್ಬರೂ ಹುಲ್ಲೆಮನೆ ಮತ್ತು ಭಾರತಿಬೈಲು ಗ್ರಾಮದ ನಿವಾಸಿಗಳಾಗಿದ್ದು, ಹುಲಿ ಉಗುರು ಪೆಂಡೆಂಟ್ ಗಳನ್ನು ಧರಿಸಿದ್ದರು ಎನ್ನಲಾಗಿದೆ.

ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಬಂಧನದಿಂದ ತಪ್ಪಿಸಿಕೊಂಡಿದ್ದು,ಅರಣ್ಯ ಇಲಾಖೆ ಶೋಧ ಕಾರ್ಯಾಚರಣೆ ನಡೆಸಿದೆ.

‘ಬಿಗ್ ಬಾಸ್’ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರು ಪೆಂಡೆಂಟ್ ಧರಿಸಿದ್ದಕ್ಕಾಗಿ ಬಿಗ್ ಬಾಸ್ ಮನೆಯಿಂದ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತಿಬ್ಬರ ಬಂಧನ ನಡೆದಿದೆ.

ಟಾಪ್ ನ್ಯೂಸ್