ಹುಬ್ಬಳ್ಳಿ;ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಾಗ ಪಾಲಿಕೆ ಸೂಚಿಸಿದ ಷರತ್ತನ್ನು ಉಲ್ಲಂಘಿಸಿದ ಅರೋಪ ಕೇಳಿ ಬಂದಿದೆ.
ಮೂರು ದಿನ ಗಣೇಶೋತ್ಸವ ಆಚರಿಸಲು ಅನುಮತಿ ಪಡೆದಿರುವ ಮೈದಾನದಲ್ಲಿ ಗಜಾನನ ಉತ್ಸವ ಮಹಾಮಂಡಳಿಯವರು,ಪೊಲೀಸರ ವಿರೋಧದ ಮಧ್ಯೆಯೇ ಪೆಂಡಾಲ್ ಎದುರಿನ ದ್ವಾರದಲ್ಲಿ ವಿ.ಡಿ.ಸಾವರ್ಕರ್,ಭಗತ್ ಸಿಂಗ್, ಶಿವಾಜಿ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಸಿದರು.ಈ ಬಗ್ಗೆ ಅನುಮತಿ ನೀಡುವಾಗ ಪಾಲಿಕೆ ನೀಡಿದ್ದ ಷರತ್ತನ್ನು ಮಹಾಮಂಡಳಿ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ.
ಇದಕ್ಕೂ ಮೊದಲು ಸಾವರ್ಕರ್ ಮತ್ತು ಬಾಲಗಂಗಾಧರ ತಿಲಕ್ ಅವರಿರುವ ಭಾವಚಿತ್ರವನ್ನೊಳಗೊಂಡ ಮಹಾಮಂಡಳಿಯ ಬ್ಯಾನರ್ ಹಾಕಲು ಮುಂದಾಗಿದ್ದಾಗ, ಪೊಲೀಸರು ತಡೆದಿದ್ದರು.ನಂತರ, ಸದಸ್ಯರು ಬ್ಯಾನರ್ ಮಡಿಚಿಟ್ಟಿದ್ದರು.ಇದಾದ ಒಂದು ಗಂಟೆಯ ಬಳಿಕ ಸದಸ್ಯರು ಗೇಟ್ ಹಾಗೂ ಸುತ್ತಮುತ್ತ ಭಾವಚಿತ್ರಗಳನ್ನು ಅಳವಡಿಸಿದ್ದರು.ಪೊಲೀಸರು ಅವನ್ನೆಲ್ಲ ತೆರವು ಮಾಡಿದ್ದಾರೆ.
ಇನ್ನು ಪಾಲಿಕೆ ವಿಧಿಸಿರುವ ಒಂಬತ್ತು ಷರತ್ತುಗಳಲ್ಲಿ,ಗಣೇಶ ಮೂರ್ತಿಯನ್ನು ಬಿಟ್ಟು ಸ್ಥಳದಲ್ಲಿ ಬೇರಾವುದೇ ಮೂರ್ತಿ, ಫ್ಲೆಕ್ಸ್,ಭಾವಚಿತ್ರ ಹಾಗೂ ಜಾಹೀರಾತನ್ನು ಪ್ರದರ್ಶಿಸುವಂತಿಲ್ಲ ಎಂದು ಹೇಳಿತ್ತು.