ಹುಬ್ಬಳ್ಳಿ;ಹಣದ ಆಮಿಷ ತೋರಿಸಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿರುವ ಪ್ರಕರಣ ಹುಬ್ಬಳ್ಳಿಯಿಂದ ವರದಿಯಾಗಿದೆ.
ಮಹದೇವ ನಗರ ನಿವಾಸಿಯಾಗಿರುವ ಹನಮಂತ ಉಪ್ಪಾರ ವಿರುದ್ಧ ಮೊದಲ ಪತ್ನಿ ನೇತ್ರಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಹನಮಂತ ಉಪ್ಪಾರ ಮೊದಲ ಪತ್ನಿ ಬಿಟ್ಟು ದೇವಸ್ಥಾನದಲ್ಲಿ 17 ವರ್ಷದ ಬಾಲಕಿಗೆ ತಾಳಿ ಕಟ್ಟಿದ್ದಾನೆ ಎಂದು ಮೊದಲ ಪತ್ನಿ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮೊದಲ ಹೆಂಡತಿ ಮೇಲೆ ಸಂಶಯದಿಂದ ಈತ ಎರಡನೇ ವಿವಾಹವಾಗಿದ್ದಾನೆ ಎನ್ನಲಾಗಿದೆ.ಈತನಿಗೆ ಮೊದಲ ಮದುವೆಯಲ್ಲಿ ಮೂವರು ಮಕ್ಕಳಿದ್ದಾರೆ ಎನ್ನಲಾಗಿದೆ.