ಕಳ್ಳರು ಮನೆಗೆ ನುಗ್ಗಿರುವುದನ್ನು ಗಮನಿಸಿ ಹೊರಗಿನಿಂದ ಬಾಗಿಲು ಲಾಕ್ ಮಾಡಿದ ಸ್ಥಳೀಯರು; ಕಳ್ಳರು ಲಾಕ್!

ತಮಿಳುನಾಡು;ಕಳ್ಳತನ ಮಾಡಲು ಬಂದ ಕಳ್ಳರು ಮನೆಯಲ್ಲೇ ಲಾಕ್​ ಆಗಿರುವ ಅಚ್ಚರಿಯ ಘಟನೆ ತಮಿಳುನಾಡಿನ ಗಡಿ ಹೊಸೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ್ ಎಂಬವರು ಕರ್ನಾಟಕ-ತಮಿಳುನಾಡಿನ ಗಡಿ ಹೊಸೂರಿನಲ್ಲಿ ವಾಸವಾಗಿದ್ದರು.

ಸಂಕ್ರಾಂತಿ ಹಬ್ಬದ ಹಿನ್ನೆಲೆ ಕುಟುಂಬ ಮನೆಗೆ ಬೀಗ ಹಾಕಿ ಊರಿಗೆ ಹೋಗಿತ್ತು.ಈ ವೇಳೆ ಮನೆಗೆ ಕಳ್ಳರು ನುಗ್ಗಿದ್ದಾರೆ.

ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯರು ಮನೆಯ ಕಡೆ ಬಂದು ನೋಡಿದ್ದಾರೆ.ಈ ವೇಳೆ ಕಳ್ಳರು ಮನೆಯೊಳಗೆ ಇರುವುದನ್ನು ಗಮನಿಸಿ ಮನೆಯ ಹೊರಗಿನಿಂದ ಬೀಗ ಹಾಕಿದ್ದಾರೆ.

ಟಾಪ್ ನ್ಯೂಸ್