ಗಾಝಾದ ಆಸ್ಪತ್ರೆ ಮೇಲೆಯೇ ಇಸ್ರೇಲ್ ವೈಮಾನಿಕ ದಾಳಿ; 500 ನಾಗರಿಕರ ಹತ್ಯೆ

ಗಾಯಾಳುಗಳು ಮತ್ತು ಇತರ ಪ್ಯಾಲೆಸ್ತೀನಿಯಾದವರಿಂದ ತುಂಬಿ ತುಳುಕುತ್ತಿದ್ದ ಗಾಜಾ ಸಿಟಿ ಆಸ್ಪತ್ರೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, 500 ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಹಮಾಸ್ ಇಸ್ರೇಲ್ ನ ವೈಮಾನಿಕ ದಾಳಿಯನ್ನು ದೂಷಿಸಿದೆ, ಕನಿಷ್ಠ 500 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಆಸ್ಪತ್ರೆಯ ಹತ್ಯಾಕಾಂಡದ ಕಾರಣದಿಂದಾಗಿ ಈ ಪ್ರದೇಶದಲ್ಲಿ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಿದೆ‌.

ಆರೋಗ್ಯ ಸಚಿವಾಲಯದ ಪ್ರಕಾರ ಈವರೆಗೆ ಗಾಜಾದಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದ್ದಾರೆ ಮತ್ತು 9,700 ಜನರು ಗಾಯಗೊಂಡಿದ್ದಾರೆ.

ಟಾಪ್ ನ್ಯೂಸ್