ಆಸ್ಪತ್ರೆಗೆ ಬೀಗ ಜಡಿದು ಪಾನಿಪುರಿ ಮಾರಾಟಕ್ಕಿಳಿದ ವೈದ್ಯೆ; ಭಾರತದ ಈ ರಾಜ್ಯದಲ್ಲಿ ಅನೇಕ ವೈದ್ಯರು ಪಾನಿಪುರಿ, ಪರೋಟ ಮಾರಾಟಕ್ಕಿಳಿದಿದ್ದಾರೆ! ಕಾರಣ ಏನು ಗೊತ್ತಾ?
ರಾಜಸ್ಥಾನ;ವೈದ್ಯರೋರ್ವರು ತಮ್ಮ ಆಸ್ಪತ್ರೆಗಳನ್ನು ಮುಚ್ಚಿ ಪಾನಿಪುರಿ ಮತ್ತು ಪರೋಟ ವ್ಯಾಪಾರಿಗಳಾಗಿದ್ದಾರೆ.
ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರ ಇತ್ತೀಚೆಗೆ ತಂದ ಆರೋಗ್ಯ ಮಸೂದೆಗೆ ವಿರೋಧಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು ಬೀದಿ ಬದಿ ವ್ಯಾಪಾರಿಗಳಾಗಿದ್ದಾರೆ.
ಮಸೂದೆ ವಿರೋಧಿಸಿ ರಾಜ್ಯಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.ಸಿಕಾರ್ ನ ಡಾ.ಅನಿತಾ ಗಾಡಿ ಮೇಲೆ ಪಾನಿಪೂರಿ ಮಾರುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಾಣಿಪುರಿ ವಿವಿಧ ರುಚಿಗಳಲ್ಲಿ ಲಭ್ಯವಿದೆ ಎಂದು ಅವರು ಬೋರ್ಡ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಅಲ್ಲದೇ ಆಸ್ಪತ್ರೆಯ ಬೋರ್ಡನ್ನೂ ತೆಗೆದು ಪಾನಿಪುರಿ ಅಂಗಡಿಯ ಬೋರ್ಡ್ ಎಂದು ಬರೆಯಲಾಗಿದೆ.
ಅವರು ತಮ್ಮ ನಾಮಫಲಕವನ್ನು ಮಾಜಿ ಖಾಸಗಿ ವೈದ್ಯೆ ಎಂದು ಬದಲಾಯಿಸಿದ್ದಾರೆ.ಮತ್ತೊಬ್ಬ ವೈದ್ಯ ತನ್ನ ಆಸ್ಪತ್ರೆಯನ್ನು ಪರೋಟಾ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ ಎಂದು ಅವರು ಹೇಳಿದರು.ಖಾಸಗಿ ಆಸ್ಪತ್ರೆಗಳ ಆತಂಕದ ನಡುವೆಯೇ ರಾಜಸ್ಥಾನ ಸರ್ಕಾರ ‘ಆರೋಗ್ಯದ ಹಕ್ಕು’ ಮಸೂದೆಗೆ ಅನುಮೋದನೆ ನೀಡಲಾಗಿದೆ.
ರಾಜಸ್ಥಾನದ ಸಿಎಂ ಅಶೋಕ್ ಗೆಹೋಟ್ ಸರ್ಕಾರ ಇತ್ತೀಚೆಗೆ ಹೊಸ ಮಸೂದೆಯನ್ನು ತಂದಿದೆ. ಈ ಮಸೂದೆಯ ಪ್ರಕಾರ, ಪ್ರತಿಯೊಬ್ಬ ನಾಗರಿಕರು ತುರ್ತು ಸಂದರ್ಭದಲ್ಲಿ ಯಾವುದೇ ಶುಲ್ಕವನ್ನು ಪಾವತಿಸದೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದಿದ್ದಾರೆ. ಈ ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.