ಹಿಂದೂ ರಾಷ್ಟ್ರ ಜಾಗೃತಿ ಸಭೆ ಬಗ್ಗೆ ಡಿಜಿಪಿಗೆ ಬಹಿರಂಗ ಪತ್ರ ಬರೆದ ಎಸ್ ಡಿಪಿಐ ನಾಯಕ ಇಲ್ಯಾಸ್ ತುಂಬೆ

ಮಂಗಳೂರು: ಮಂಗಳೂರಿನಲ್ಲಿ ಮಾರ್ಚ್ 12ರಂದು ನಡೆಸಲು ಉದ್ದೇಶಿಸಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ವಿರೋಧಿಸಿ ಕರ್ನಾಟಕ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆಯವರು ಬಹಿರಂಗ ಪತ್ರವನ್ನು ಬರೆದಿದ್ದಾರೆ.

ಈ ಸಭೆಯು ಸಂವಿಧಾನ ವಿರೋಧವಾಗಿದ್ದು, ದೇಶದ ಜಾತ್ಯತೀತ ಸ್ವರೂಪವನ್ನು ಕದಡುವ ವ್ಯವಸ್ಥಿತ ಹುನ್ನಾರದ ಭಾಗವಾಗಿದೆ. ಯಾವುದೇ ಧರ್ಮದ ಆಧಾರದಲ್ಲಿ ಈ ದೇಶವನ್ನು ಕಟ್ಟುವುದು ಎಂದು ಯಾರಾದರೂ ಘೋಷಣೆ ಮಾಡುವುದಾದರೆ ಅದು ದೇಶದ್ರೋಹಿ ಕಾನೂನಿಗೆ ಒಳಪಡುವುದಾಗಿದೆ ಎಂದು ಹೇಳಿದ್ದಾರೆ.

ಆದ್ದರಿಂದ ಈ ಸಭೆಯ ಪ್ರಾಯೋಜಕರಾದ ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸ್ ಮಹಾ ನಿರ್ದೇಶಕರನ್ನು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com