ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ; ಸರಕಾರಕ್ಕೆ ಆಗ್ರಹಿಸಿದ ಹಿಂದೂ ಮಹಾ ಸಭಾದ ರಾಷ್ಟ್ರೀಯ ಅಧ್ಯಕ್ಷ

ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಚಂದ್ರನನ್ನು ‘ಹಿಂದೂ ರಾಷ್ಟ್ರ ಎಂದು ಘೋಷಿಸಲು ಚಂದ್ರಯಾನ -3ರ ಲ್ಯಾಂಡಿಂಗ್ ಸ್ಪಾಟ್‌ನ್ನು ಅದರ ರಾಜಧಾನಿಯನ್ನಾಗಿ ಮಾಡುವಂತೆ ಕರೆ ನೀಡಿ ಎಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಇತರ ಧರ್ಮಗಳಿಗಿಂತ ಮೊದಲು ಭಾರತ ಸರ್ಕಾರವು ಚಂದ್ರನ ಮೇಲೆ ತನ್ನ ಮಾಲೀಕತ್ವವನ್ನು ಪ್ರತಿಪಾದಿಸಬೇಕು ಮತ್ತು ಅದಕ್ಕಾಗಿ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕೆಂದು ಚಕ್ರಪಾಣಿ ಮಹಾರಾಜ್ ಹೇಳಿದ್ದಾರೆ.

ಚಂದ್ರನನ್ನು ಹಿಂದೂ ಸನಾತನ ರಾಷ್ಟ್ರ ಎಂದು ಸಂಸತ್ತು ಘೋಷಿಸಬೇಕು.ಚಂದ್ರಯಾನ 3 ಇಳಿಯುವ ಸ್ಥಳವನ್ನು ಅದರ ರಾಜಧಾನಿ ‘ಶಿವಶಕ್ತಿ ಪಾಯಿಂಟ್’ ಆಗಿ ಅಭಿವೃದ್ಧಿಪಡಿಸಬೇಕು.ಆದ್ದರಿಂದ ಜಿಹಾದಿ ಮನಸ್ಥಿತಿಯ ಯಾವುದೇ ಭಯೋತ್ಪಾದಕ ಅಲ್ಲಿಗೆ ತಲುಪಬಾರದು ಎಂದು ಚಕ್ರಪಾಣಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಚಕ್ರಪಾಣಿ ಅವರು ಈ ಹಿಂದೆ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ದೆಹಲಿಯಲ್ಲಿ ‘ಗೋಮುತ್ರ ಪಾರ್ಟಿ’ ನಡೆಸಿ ಗಮನ ಸೆಳೆದಿದ್ದರು.ಪಾರ್ಟಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರು ಕೋವಿಡ್ -19ನ್ನು ನಿವಾರಿಸುವುದಾಗಿ ಹೇಳಿ ಗೋಮೂತ್ರವನ್ನು ಸೇವಿಸಿದ್ದರು.

ಟಾಪ್ ನ್ಯೂಸ್