ಒಂದೇ ವಾರದಲ್ಲಿ 108 ಮಂದಿ ಹೃದಯಾಘಾತದಿಂದ ಮೃತ್ಯು;ಚಳಿಗೆ ಹೆಚ್ಚಿದ ಹೃದಯಾಘಾತದಿಂದ ಸಾವು

ಉತ್ತರಪ್ರದೇ;ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಂದೇ ವಾರದಲ್ಲಿ 108 ಮಂದಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎನ್ನುವ ಶಾಕಿಂಗ್ ಅಂಕಿ-ಅಂಶಗಳು ಬಹಿರಂಗವಾಗಿದೆ.

ಕಾನ್ಪುರದಲ್ಲಿ ಶೀತಗಾಳಿ ಮುಂದುವರಿದಿದೆ. ಕನಿಷ್ಠ ತಾಪಮಾನ 2 ಡಿಗ್ರಿ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಚಳಿಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ತೀವ್ರ ಚಳಿಯಿಂದ ಹೃದ್ರೋಗದಿಂದ ಬಳಲುತ್ತಿರುವ ರೋಗಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಲಕ್ಱ್ಮೀಪತ್​ ಸಿಂಘಾನಿಯಾ ಇನ್​ಸ್ಟಿಟ್ಯೂಟ್​ ಆಫ್​ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್​ ಸರ್ಜರಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕಳೆದ ಒಂದು ವಾರದಲ್ಲಿ 723 ಹೃದ್ರೋಗಿಗಗಳು ಆಸ್ಪತ್ರೆಯ ತುರ್ತು ಮತ್ತು ಹೊರರೋಗಿ ವಿಭಾಗಕ್ಕೆ ದಾಖಲಾಗಿದ್ದಾರೆ. ಈ ಪೈಕಿ 108 ಜನರು ಮೃತಪಟ್ಟಿದ್ದಾರೆ.

ಮೃತರ ಪೈಕಿ 44 ಜನರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇನ್ನುಳಿದವರು ಆಸ್ಪತ್ರೆಗೆ ಬರುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಹೃದ್ರೋಗ ವಿಭಾಗದ ನಿರ್ದೇಶಕ ಪ್ರೊಫೆಸರ್ ವಿನಯ್ ಕೃಷ್ಣ ಮಾತನಾಡಿ, ಚಳಿಯು ಹೃದಯ ಮತ್ತು ಮನಸ್ಸು ಎರಡಕ್ಕೂ ಸಮಸ್ಯೆ ಉಂಟುಮಾಡಿದೆ. ಚಳಿ ಹಾಗೂ ತಂಪು ವಾತಾವರಣದಿಂದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕೂಡ ಆಗುತ್ತಿದೆ. ಇದರಿಂದಾಗಿ ರಕ್ತದೊತ್ತಡ ಹೆಚ್ಚಾಗಿ ಜನರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್