ಮಂಗಳೂರು;ಹಿಜಾಬ್ ನಿಷೇಧ ಸೇರಿ ಬಿಜೆಪಿ ಸರಕಾರ ಜಾರಿಗೆ ತಂದ ಜನವಿರೋಧಿ ನೀತಿಗಳನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಹಿಂಪಡೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಯುಟಿ ಖಾದರ್ ಹೇಳಿದ್ದಾರೆ.
ಸಿದ್ದರಾಮಯ್ಯ ಸರಕಾರ ಅಧಿಕಾರ ಸ್ವೀಕಾರದ ಬಳಿಕ ಪರಾಮರ್ಶೆ ನಡೆಸಿ ಬಿಜೆಪಿ ಜಾರಿಗೆ ತಂದ ಜನವಿರೋಧಿ ನೀತಿಗಳನ್ನು ತೆಗೆದು ಹಾಕಲಾಗುವುದು.ಸಿದ್ದರಾಮಯ್ಯ ಸರಕಾರ ಜನರಿಗಾಗಿಯೇ ಇರಲಿದೆ.ಜನರ ಕಷ್ಟಗಳಿಗೆ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.ಇದೇ ವೇಳೆ ಉಪಮುಖ್ಯಮಂತ್ರಿ ಶಿವಕುಮಾರ್ ಸೇರಿ ಹಲವು ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
2023ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ 135 ಸ್ಥಾನ ಪಡೆದುಕೊಳ್ಳುವ ಮೂಲಕ ಬಹುಮತ ಪಡೆದುಕೊಂಡಿದೆ.ಆಡಳಿತರೂಢ ಬಿಜೆಪಿ 66 ಸ್ಥಾನಕ್ಕೆ ಇಳಿದು ತೃಪ್ತಿ ಪಟ್ಟುಕೊಂಡಿದೆ.
ರಾಜ್ಯದಲ್ಲಿ ಬಿಜೆಪಿ ಸೋಲಿನ ಬಗ್ಗೆ ಅವಲೋಕನ ಬಿಜೆಪಿ ಪಾಲಯದಲ್ಲಿ ನಡೆಯುತ್ತಿದೆ.ಕೆಲ ಬಿಜೆಪಿ ಶಾಸಕರು ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಬಿಜೆಪಿಯ ನೀತಿಗಳೇ ಕಾರಣವಾಗಿತ್ತು, ಕೆಲ ಶಾಸಕರ ದುರಹಂಕಾರಿ ಹೇಳಿಕೆಗಳು, ಸಾಮಾಜಿಕವಾಗಿ ಸೃಷ್ಟಿಯಾಗಿದ್ದ ಗೊಂದಲಗಳು, ಓಲೈಕೆ ರಾಜಕೀಯ, ಅಲ್ಪಸಂಖ್ಯಾತರ ನಿರ್ಲಕ್ಷ್ಯ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಲಾಗಿದೆ.
ಬಿಜೆಪಿ ಆಡಳಿತದ ವೇಳಿನ ಹಿಜಾಬ್,ಹಲಾಲ್ ನಿಷೇಧ ವಿವಾದ, ವ್ಯಾಪಾರ ನಿಷೇಧ, ಮೀಸಲಾತಿ ರದ್ಧತಿ ಕಾಂಗ್ರೆಸ್ ಗೆ ಮತ ಹೆಚ್ಚು ಕ್ರೋಡೀಕರಣಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.