ಮಧ್ಯಪ್ರದೇಶ; ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಬಂಧಿತ
ದಾಮೋಹ್‌ನ ಗಂಗಾ ಜಮ್ನಾ ಹೈಯರ್ ಸೆಕೆಂಡರಿ ಶಾಲೆಯ
ಪ್ರಾಂಶುಪಾಲರು, ಶಿಕ್ಷಕ ಮತ್ತು ಸಿಬ್ಬಂದಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಪ್ರಾಂಶುಪಾಲರಾದ ಅಫ್ಶಾ ಶೇಖ್, ಗಣಿತ ಶಿಕ್ಷಕ ಅನಾಸ್ ಅಥರ್ ಮತ್ತು ಸಿಬ್ಬಂದಿ ರುಸ್ತಮ್ ಅಲಿ ಅವರನ್ನು ಬಂಧಿಸಲಾಗಿತ್ತು. ಎರಡು ತಿಂಗಳಿನಿಂದ ಇವರು ಜೈಲಿನಲ್ಲಿದ್ದರು.
ಜಾಮೀನು ವೇಳೆ ಇತರ ಧರ್ಮಗಳ ವಿದ್ಯಾರ್ಥಿಗಳಿಗೆ ಯಾವುದೇ ಧಾರ್ಮಿಕ ಶಿಕ್ಷಣ ಅಥವಾ ಇಸ್ಲಾಂ ಧರ್ಮಕ್ಕೆ ಸೇರಿದ ಯಾವುದೇ ಪುಸ್ತಕಗಳನ್ನು ನೀಡಬಾರದು, ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸುವಂತೆ ಒತ್ತಾಯಿಸಬಾರದು ಎಂದು ಕೋರ್ಟ್ ಆರೋಪಿಗಳಿಗೆ ಹೇಳಿದೆ.
ರಾಜ್ಯದ ಪರ ವಕೀಲ ಪ್ರದೀಪ್ ಗುಪ್ತಾ ಆರೋಪಿಗಳ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಆರೋಪಿಗಳ ಪರ ವಕೀಲ ಖಾಸಿಂ ಅಲಿ, ನನ್ನ ಕಕ್ಷಿದಾರರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.ತಲೆಯ ಸ್ಕಾರ್ಪ್‌ನ್ನು ಶಾಲಾ ಆಡಳಿತ ಮಂಡಳಿ ಕಡ್ಡಾಯಗೊಳಿಸಿರುವುದು ಎಂದು ಹೇಳಿದ್ದಾರೆ.
ಮೇ.10ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೋಸ್ಟರನ್ನು ಶಾಲಾ ಆವರಣದ ಹೊರಗೆ ಹಾಕಲಾಗಿತ್ತು.ಅದರಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು ಶಿರವಸ್ತ್ರವನ್ನು ಧರಿಸಿದ್ದರು. ಇದು ಬಲಪಂಥೀಯ ಗುಂಪುಗಳಿಂದ ಪ್ರತಿಭಟನೆಗೆ ಕಾರಣವಾಗಿತ್ತು.