ಹಿಜಾಬ್ ವಿವಾದ ಭುಗಿಲೆದ್ದ ಶಾಲೆಯ ಒಂದು ಭಾಗ ನೆಲಸಮಕ್ಕೆ ಆದೇಶ;ವರದಿ

ಹಿಜಾಬ್ ವಿವಾದ ಭುಗಿಲೆದ್ದ ಶಾಲೆಯ ಒಂದು ಭಾಗ ನೆಲಸಮಕ್ಕೆ ಆದೇಶ;ವರದಿ

ಮಧ್ಯಪ್ರದೇಶ; ದಾಮೋಹ್‌ನಲ್ಲಿರುವ ಗಂಗಾ ಜಮ್ನಾ ಶಾಲೆಯ ಒಂದು ಭಾಗವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ತಿಳಿದುಬಂದ ನಂತರ ಅದನ್ನು ನೆಲಸಮ ಮಾಡಲಾಗುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಸಂಸ್ಥೆಯ ಅಧಿಕಾರಿಗಳು ಹಿಂದೂ ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪದ ನಡುವೆ ಶಾಲೆಯ ಒಂದು ಭಾಗವನ್ನು ಅಕ್ರಮ ಕಟ್ಟಡ ಎಂದು ಕೆಡವಲು ಆದೇಶ ಬಂದಿದೆ.

ಇನ್ನು ಹಿಜಾಬ್ ವಿಚಾರದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಶಾಲೆಗೆ ಕ್ಲೀನ್ ಚಿಟ್ ನೀಡಿದ್ದಾರೆ‌.ವಿದ್ಯಾರ್ಥಿಗಳು ಹಿಜಾಬ್ ಧರಿಸುವಂತೆ ಬಲವಂತ ಮಾಡಿಲ್ಲ ಎಂದು ಡಿಇಒ ವರದಿ ಹೇಳಿದೆ.ಡಿಇಒ ಶಾಲೆಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವರು ಹೇಳಿದ್ದಾರೆ.

ವಿದ್ಯಾರ್ಥಿಗಳು ಹಿಜಾಬ್ ಧರಿಸುವಂತೆ ಮಾಡುವುದು ಖಂಡನೀಯ. ಶಾಲೆಯ ವಿರುದ್ಧ ಅತಿಕ್ರಮಣ ವಿರೋಧಿ ಅಭಿಯಾನ ಮುಂದುವರಿಯಲಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಏನಿದು ವಿವಾದ?
ದಾಮೋಹ್ ಜಿಲ್ಲೆಯ ಗಂಗಾ ಜಮ್ನಾ ಶಾಲೆಯ ಆಡಳಿತ ಮಂಡಳಿಯು ಹಿಜಾಬ್‌ನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬ್ಯಾನರ್ ಹಾಕಿದೆ ಎಂದು ವಿವಾದ ಪ್ರಾರಂಭವಾಗಿತ್ತು

ಬಲಪಂಥೀಯ ಗುಂಪುಗಳು ಬ್ಯಾನರ್‌ನಲ್ಲಿರುವ ನಾಲ್ವರು ವಿದ್ಯಾರ್ಥಿಗಳು ಹಿಂದೂಗಳು ಮತ್ತು ಅವರು ಹಿಜಾಬ್ ಧರಿಸಲು ಬಲವಂತಪಡಿಸಲಾಗಿದೆ ಎಂದು ಹೇಳಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಹಿಜಾಬ್ ವಿಚಾರವಾಗಿ ತನಿಖೆಗೆ ಆದೇಶಿಸಿತ್ತು.

ಸಂಬಂಧಿಸಿದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರೊಂದಿಗೆ ಮತ್ತು ಅವರ ಪೋಷಕರೊಂದಿಗೆ ಫೋನ್‌ನಲ್ಲಿ ಅಧಿಕಾರಿ ಮಾತನಾಡಿದ್ದಾರೆ ಮತ್ತು ಅವರಿಗೆ ಸ್ಕಾರ್ಫ್‌ ಸಮಸ್ಯೆ ಇಲ್ಲ ಮತ್ತು ಸ್ಕಾರ್ಪ್ ಹಾಕಲು ಬಲವಂತಪಡಿಸಲಾಗಿಲ್ಲ ಎಂದು ತಿಳಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ