ನವದೆಹಲಿ;ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯಲು ಕುಟುಂಬ ನ್ಯಾಯಾಲಯಗಳನ್ನು ಮಾತ್ರ ಸಂಪರ್ಕಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
2017ರಲ್ಲಿ ಶರಿಯತ್ ಕೌನ್ಸಿಲ್‌ನಿಂದ ತನ್ನ ಪತ್ನಿ ಪಡೆದಿರುವ ವಿಚ್ಛೇಧನ ಮಾನ್ಯದ ಪ್ರಮಾಣಪತ್ರವನ್ನು ನ್ಯಾಯಾಲಯ ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಶಿವರಾಮನ್ ಅವರಿದ್ದ ಪೀಠವು ತಮಿಳುನಾಡು ತೌಹೀದ್ ಜಮಾತ್ ಮತ್ತು ಷರಿಯತ್ ಕೌನ್ಸಿಲ್ ನೀಡಿದ ವಿಚ್ಛೇಧನ ಮಾನ್ಯದ ಪ್ರಮಾಣಪತ್ರವನ್ನು ರದ್ದುಗೊಳಿಸಿದೆ.
ವಿಚ್ಛೇದಿತ ದಂಪತಿ ತಮ್ಮ ವಿವಾದಗಳನ್ನು ಪರಿಹರಿಸಲು ಕುಟುಂಬ ನ್ಯಾಯಾಲಯ ಅಥವಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಲು ನಿರ್ದೇಶಿಸಿದೆ.
ಖಾಸಗಿ ಸಂಸ್ಥೆಗಳು ನೀಡುವ ವಿಚ್ಛೇದನ ಮಾನ್ಯದ ಪ್ರಮಾಣಪತ್ರಗಳು ಕಾನೂನಿನಲ್ಲಿ ಅಮಾನ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.