ಮುಳ್ಳೇರಿಯ;ಸ್ನಾನಕ್ಕೆ ಹೊಳೆಗಿಳಿದ 11ರ ಹರೆಯದ ಬಾಲಕ ನೀರಿನಲ್ಲಿ ಮುಳುಗಿದ್ದು,ಈ ವೇಳೆ 8 ವರ್ಷದ ಬಾಲಕ ಸಾಹಸ ಪ್ರದರ್ಶಿಸಿ ರಕ್ಷಿಸಿದ ಘಟನೆ ಪ್ರಶಂಸೆಗೆ ಕಾರಣವಾಗಿದೆ.
ಪಳ್ಳಂಗೋಡು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಸ್ನಾನಕ್ಕೆ ಇಳಿದು ಅಪಾಯಕ್ಕೆ ಸಿಲುಕಿದ್ದ ಬಾಲಕನನ್ನು ಎಂಟರ ಹರೆಯದ ಬಾಲಕ ಮುಹಮ್ಮದ್ ಹಿಬಾದತುಲ್ಲ (8) ಸಾಹಸದಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಬಾಲಕನ ಸಾಹಸ ಮತ್ತು ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಬಾಲಕನ ಸಾಹಸಕ್ಕೆ ವಿವಿಧ ಸಂಘಟನೆಗಳು ಪ್ರಶಂಸೆ ಮಾಡಿದೆ.